Get In Touch

Get Answer To Your Queries

acceptence

ವಾಟರ್ ಪ್ರೂಫಿಂಗ್ ನ ವೆಚ್ಚ: ಒಳಾಂಗಣ ಮತ್ತು ಹೊರಾಂಗಣ ವಾಟರ್ ಪ್ರೂಫಿಂಗ್

ಹವಾಮಾನ ಮತ್ತು ಮಳೆ ನಿಮ್ಮ ಮನೆಯ ಮೇಲ್ಛಾವಣಿ, ಗೋಡೆ, ಟೆರೇಸ್ ಮುಂತಾದ  ಹೊರಾಂಗಣದ ಮೇಲೆ ಪ್ರಭಾವ ಬೀರುತ್ತವೆ.  ಅಲ್ಲದೇ, ಒಳಾಂಗಣ ಪ್ರದೇಶದ ಬಾತ್ ರೂಂ, ಅಡುಗೆ ಮನೆ ಮುಂತಾದೆಡೆ ಸಾಕಷ್ಟು ನೀರಿನ ಸಂಪರ್ಕ ಇರುತ್ತದೆ. ಇಂಥ ಪ್ರದೇಶಗಳ ಮೂಲಕ ಕಟ್ಟಡಕ್ಕೆ ನೀರು ಸೋರುವ ಮತ್ತು ತೇವವಾಗುವ ಅಪಾಯವಿದೆ. ಮನೆಯ ಇಂಥಹ ಅತಿ ಹೆಚ್ಚು ಅಪಾಯದ ಪ್ರದೇಶಗಳಲ್ಲಿ ಡಬಲ್ ಸುರಕ್ಷತೆಗಾಗಿ ಫ್ಲೆಕ್ಸ್ ಅಥವಾ ಹೈಫ್ಲೆಕ್ಸ್ ಗಳನ್ನು ಬಳಸಬೇಕು.

logo

ಫ್ಲೆಕ್ಸ್ ಅಥವಾ ಹೈ ಫ್ಲೆಕ್ಸ್ ಗಳು ಪಾಲಿಮರ್ ಆಧಾರಿತ ವಾಟರ್ ಪ್ರೂಫಿಂಗ್ ಉತ್ಪನ್ನಗಳಾಗಿವೆ. ಇದು ಹೆಚ್ಚು ಬಾಳಿಕೆ ಬರುವ ಮತ್ತು ಅಭೇದ್ಯವಾದ ಕೋಟಿಂಗ್ ಅನ್ನು ನಿರ್ಮಿಸುತ್ತದೆ.. ಇದರಿಂದ ನೀರಿನ ಅಂಶವು ಕಟ್ಟಡದ ಒಳಗೆ ಬರುವುದನ್ನು ತಡೆಯುತ್ತದೆ.  ಫ್ಲೆಕ್ಸ್ ಮತ್ತು ಹೈಫ್ಲೆಕ್ಸ್ ಕೋಟಿಂಗ್ ಗಳು ಎಲ್ಲ ಕಡೆದ ಹೊಂದಿಕೊಳ್ಳುತ್ತವೆ ಮತ್ತು 50% ನಿಂದ 100% ಹಿಗ್ಗುವ ಗುಣವನ್ನು ಹೊಂದಿರುತ್ತವೆ. ಇದರಿಂದ ಬಿರುಕುಗಳು ಉಂಟಾಗುವ ಸಾಧ್ಯತೆಯನ್ನು ಕಡಿಮೆ ಮಾಡಿ, ಬಾಳಿಕೆಯನ್ನು ಹೆಚ್ಚಿಸುತ್ತದೆ. ಅವುಗಳು 7 ಬಾರ್‌ಗಳವರೆಗಿನ ನೀರಿನ ಒತ್ತಡವನ್ನು ತಡೆದುಕೊಳ್ಳಬಲ್ಲವು. ಇದು  ವಾತಾವರಣದ ಪರಿಸ್ಥಿತಿಗೆ ಅನುಗುಣವಾಗಿ ಮನೆಯಲ್ಲಿ ಉಂಟಾಗುವ ಭಾರಿ ನೀರಿನ ಪ್ರಭಾವಕ್ಕೆ ಪ್ರತಿರೋಧ ಒಡ್ಡಲು ಸಹಾಯವಾಗಬಲ್ಲದು.




ಫ್ಲೆಕ್ಸ್/ಹೈಫ್ಲೆಕ್ಸ್ ಗಳ ಅಪ್ಲಿಕೇಶನ್ ಗಳು

ಫ್ಲೆಕ್ಸ್ ಮತ್ತು ಹೈಫ್ಲೆಕ್ಸ್ ಗಳನ್ನು ಹೊರಾಂಗಣಕ್ಕೆ ಪೊಸಿಟಿವ್ ಸೈಡ್ ನಲ್ಲಿ ಅಲ್ಲದೆ, ಮನೆಯ ಒಳಾಂಗಣದಲ್ಲಿ ತೇವಗೊಳ್ಳುವ ಎಲ್ಲ ಭಾಗಗಳಲ್ಲಿ ಬಳಸಬಹುದಾಗಿದೆ. ಈ ಸ್ಥಳಗಳಲ್ಲಿ ಬಳಸಬಹುದು:




ಫ್ಲೆಕ್ಸ್ ಅಥವಾ ಹೈಫ್ಲೆಕ್ಸ್‌ ವಾಟರ್‌ಪ್ರೂಫಿಂಗ್ ಕೋಟ್ ಬಳಸುವುದರ ಪ್ರಯೋಜನಗಳು



ಇದರ ಪಾಲಿಮರ್ ಬೇಸ್ ನಿಂದ ಹೈ ಫ್ಲೆಕ್ಸ್ ಮತ್ತು ಫ್ಲೆಕ್ಸ್ ಗಳು ನಿಮ್ಮ ಮನೆಯಲ್ಲಿ ಸೋರಿಕೆಯಾಗಬಹುದಾದ ಹಾಗೂ ತಳಪಾಯಕ್ಕೆ ಅಪಾಯ ತಂದೊಡ್ಡಬಹುದಾದ ತೇವಾಂಶದಿಂದ ಅತ್ಯುತ್ತಮ ರಕ್ಷಣೆ ನೀಡುತ್ತವೆ.

ಇದರಲ್ಲಿ ಅಳವಡಿಸಲಾದ ಅಭೇದ್ಯವಾದ ಪದರಗಳ ಕೋಟಿಂಗ್ ಮನೆಯ ಒಳಗೆ ನೀರು ಬರುವುದನ್ನು ತಡೆಯುತ್ತದೆ. ಅಲ್ಲದೆ, ತುಕ್ಕು ಹಿಡಿಯುವುದು ಮಾತ್ರವಲ್ಲದೆ ಇನ್ನಿತರೆ ರೀತಿಯ ಹಾನಿಗಳನ್ನೂ ತಡೆಯುತ್ತದೆ.

ಹೈಫ್ಲೆಕ್ಸ್ ಮತ್ತು ಫ್ಲೆಕ್ಸ್ ಗಳು ನೀರಿನ ಭಾರಿ ಒತ್ತಡಕ್ಕೆ ಗಟ್ಟಿಯಾದ ತಡೆಯನ್ನು ಒಡ್ಡುತ್ತವೆ. ನೀರಿನ ಸಂಪರ್ಕದಿಂದ ಆಗುವ ಹಾನಿಯನ್ನು ತಪ್ಪಿಸಿ ನಿಮ್ಮ ಮನೆ ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತವೆ.

ಹೈಫ್ಲೆಕ್ಸ್ ಮತ್ತು ಫ್ಲೆಕ್ಸ್ ಗಳು 50% ನಿಂದ 100% ಹಿಗ್ಗುವಿಕೆಯ ಗುಣವನ್ನು ಹೊಂದಿದೆ. ಇದರಿಂದ ಪ್ಲಾಸ್ಟರ್ ಗೆ ಬಿರುಕು ಬರುವುದನ್ನು ತಡೆದು ಉತ್ತಮ ಸುರಕ್ಷತೆಯನ್ನು ನೀಡುತ್ತದೆ.



ಫ್ಲೆಕ್ಸ್/ಹೈಫ್ಲೆಕ್ಸ್ ಬಳಕೆಯ ವಿಧಾನಗಳು




 ಗಮನಿಸಿ: ಫ್ಲೆಕ್ಸ್ ಅಥವಾ ಹೈಫ್ಲೆಕ್ಸ್ ನ್ನು ಉಪಯೋಗಿಸುವ ಮೊದಲು ಎಲ್ಲ ಕಾಂಕ್ರಿಟ್, ಗಾರೆ ಮತ್ತು ಪ್ಲಾಸ್ಟರ್‌ ಬಳಕೆಗಳಿಗಾಗಿ ಗೆ WP-200 ಇಂಟಿಗ್ರಲ್  ವಾಟರ್ ಪ್ರೂಫಿಂಗ್ ಲಿಕ್ವಿಡ್ ಬಳಸುವಂತೆ ಶಿಫಾರಸು ಮಾಡಲಾಗುತ್ತದೆ.



ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು

 ತೇವಾಂಶವು ಮೇಲ್ಛಾವಣಿ, ಬಾಹ್ಯ ಗೋಡೆಗಳು, ಮಹಡಿಗಳು ಮತ್ತು ಅಡಿಪಾಯದ ಮೂಲಕವೂ ನಿಮ್ಮ ಮನೆಯಲ್ಲಿ ಕಾಣಿಸಿಕೊಳ್ಳಬಹುದು. ಆದ್ದರಿಂದ, ನಿಮ್ಮ ಮನೆಯ ಶಕ್ತಿಯನ್ನು ತೇವದಿಂದ ರಕ್ಷಿಸಲು, ನಿಮ್ಮ ಸಂಪೂರ್ಣ ಮನೆಯನ್ನು ಅಲ್ಟ್ರಾಟೆಕ್ ವೆದರ್ ಪ್ಲಸ್‌ನೊಂದಿಗೆ ನಿರ್ಮಿಸಿ. ಅಲ್ಟ್ರಾಟೆಕ್ ವೆದರ್ ಪ್ಲಸ್ ನೀರನ್ನು ಹಿಮ್ಮೆಟ್ಟಿಸುತ್ತದೆ ಮತ್ತು ಮನೆಗೆ ಪ್ರವೇಶಿಸುವ ತೇವದ ವಿರುದ್ಧ ಉತ್ತಮ ರಕ್ಷಣೆ ನೀಡುತ್ತದೆ.

ನಿಮ್ಮ ಮನೆಯ ಸಂರಚನೆಯಲ್ಲಿ ಕಂಡುಬರುವ ಅನಗತ್ಯ ಆದ್ರತೆಯ ಅಂಶವನ್ನು ತೇವಾಂಶ ಎಂದು ಕರೆಯಲಾಗುತ್ತದೆ. ತೇವವು ನಿಮ್ಮ ಮನೆಯ ಬಲತ್ವದ ದೊಡ್ಡ ಶತ್ರು. ತೇವಾಂಶವು ನಿಮ್ಮ ಮನೆಯನ್ನು ಪ್ರವೇಶಿಸಿದ ನಂತರ ಅದು ವೇಗವಾಗಿ ಹರಡುತ್ತದೆ. ನಿಮ್ಮ ಮನೆಯ ರಚನೆಯನ್ನು ಒಳಗಿನಿಂದ ಟೊಳ್ಳು ಮತ್ತು ದುರ್ಬಲಗೊಳಿಸುತ್ತದೆ. ತೇವವು ನಿಮ್ಮ ಮನೆಯ ಜೀವನವನ್ನು ಕಡಿಮೆ ಮಾಡುತ್ತದೆ ಮತ್ತು ಅಂತಿಮವಾಗಿ ನೀರಿನ ಹರಿಯುವಿಕೆಯಾಗಿ ಬದಲಾಗುತ್ತದೆ.

ಮನೆಯ ಯಾವುದೇ ಭಾಗದಿಂದ ತೇವಾಂಶವು ಪ್ರವೇಶಿಸಬಹುದು. ಇದು ಚಾವಣಿಯ ಮತ್ತು ಗೋಡೆಗಳ ಮೂಲಕ ಪ್ರವೇಶಿಸಬಹುದು ಮತ್ತು ಮನೆಯಾದ್ಯಂತ ವೇಗವಾಗಿ ಹರಡಬಹುದು. ಇದು ಮನೆಯ ಅಡಿಪಾಯದಿಂದಲೂ ಪ್ರವೇಶಿಸಬಹುದು, ಮತ್ತು ನಂತರ ಗೋಡೆಗಳ ಮೂಲಕ ಹರಡಬಹುದು

 ತೇವಾಂಶವು ಕಬ್ಬಿಣದ ಸವೆತ ಮತ್ತು ಆರ್ಸಿಸಿಯಲ್ಲಿ ಬಿರುಕುಗಳ ರಚನೆಗೆ ಕಾರಣವಾಗುತ್ತದೆ. ಇದು ಸಂರಚನೆಯ ಬಲವನ್ನು ತಗ್ಗಿಸುತ್ತದೆ. ಇದು ಮನೆಯ ರಚನೆಯನ್ನು ಟೊಳ್ಳು ಮಾಡುತ್ತದೆ ಮತ್ತು ಒಳಗಿನಿಂದ ದುರ್ಬಲಗೊಳಿಸುತ್ತದೆ, ಅಂತಿಮವಾಗಿ ಅದರ ಬಾಳಿಕೆಯ ಮೇಲೆ ಪರಿಣಾಮ ಬೀರುತ್ತದೆ. ದುರದೃಷ್ಟವಶಾತ್, ತೇವವು ಗೋಚರಿಸುವ ಹೊತ್ತಿಗೆ, ಅಷ್ಟರಲ್ಲೇ ಹಾನಿ ಈಗಾಗಲೇ ಉಂಟಾಗಿರುತ್ತದೆ!

ಈ ತೇವಾಂಶ ಎಂಬುದು ಗುಣಪಡಿಸಲಾಗದ ಕಾಯಿಲೆ ಇದ್ದಂತೆ. ಇದು ನಿಮ್ಮ ಮನೆಯನ್ನು ಒಳಗಿನಿಂದ ಟೊಳ್ಳು ಮತ್ತು ದುರ್ಬಲಗೊಳಿಸುತ್ತದೆ. ಒದ್ದೆಯಾದ ನಂತರ, ಅದನ್ನು ತೊಡೆದುಹಾಕಲು ಅಸಾಧ್ಯ. ವಾಟರ್ ಪ್ರೂಫಿಂಗ್ ಕೋಟ್, ಪೇಂಟ್ ಅಥವಾ ಡಿಸ್ಟೆಂಪರ್‌‌ನ ತೆಳುವಾದ ಪದರದಿಂದ ಬೇಗನೆ ಮೇಲ್ಮೈ ಪೊರೆ ಉದುರುತ್ತದೆ. ಅಲ್ಲದೆ, ತೇವಾಂಶದ ವಿರುದ್ಧ ದೀರ್ಘಕಾಲೀನ ರಕ್ಷಣೆಯನ್ನು ನೀಡುವುದಿಲ್ಲ. ದುಬಾರಿ ಮತ್ತು ಅನಾನುಕೂಲವಾಗಿರುವುದರ ಜೊತಗೆ, ಮರುಸ್ಥಾಪನೆ ಮತ್ತು ಪುನಃ ಬಣ್ಣ ಬಳಿಯುವುದು ನಿಮಗೆ ತಾತ್ಕಾಲಿಕ ಪರಿಹಾರವನ್ನು ಮಾತ್ರ ನೀಡುತ್ತದೆ. ಆದ್ದರಿಂದ, ನಿಮ್ಮ ಮನೆಯ ಬಲವನ್ನು ತೇವಾಂಶದಿಂದ ರಕ್ಷಿಸಲು ಮೊದಲೇ ತಡೆಗಟ್ಟುವ ಪರಿಹಾರವನ್ನು ಬಳಸುವುದು ವಿವೇಕಯುತ ನಡೆಯಾಗಿದೆ.


ಜಲನಿರೋಧಕ ಕರಪತ್ರ

ಅಪ್ಲಿಕೇಶನ್ ಗೈಡ್ 

ನಮ್ಮ ಸ್ಟೋರ್ ಲೊಕೇಟರ್




ಅಲ್ಟ್ರಾಟೆಕ್ ಹೋಮ್ ಎಕ್ಸ್‌ಪರ್ಟ್ ಸ್ಟೋರ್.

ನೀವು WP+200, ಜಲನಿರೋಧಕ ದ್ರವವನ್ನು ನಿಮ್ಮ ಹತ್ತಿರದಲ್ಲಿ ಖರೀದಿಸಬಹುದು
ಅಲ್ಟ್ರಾಟೆಕ್ ಹೋಮ್ ಎಕ್ಸ್‌ಪರ್ಟ್ ಸ್ಟೋರ್.



Loading....