Step No.1
ನಿಮ್ಮ ಮನೆಯನ್ನು ನಿರ್ಮಿಸುವ ಮೊದಲ ಹೆಜ್ಜೆಯು ಬಲವಾದ ಮತ್ತು ಭದ್ರವಾದ ಅಡಿಪಾಯವನ್ನು ಹಾಕುವುದಾಗಿರುತ್ತದೆ. ಮೊದಲಿಗೆ, ನಿವೇಶನದಲ್ಲಿ ಬಂಡೆಗಳು ಮತ್ತು ಭಗ್ನಾವಶೇಷಗಳಿದ್ದಲ್ಲಿ, ಅವುಗಳನ್ನು ತೆರವುಗೊಳಿಸಬೇಕಾಗುತ್ತದೆ. ಅಗೆತವನ್ನು ಪ್ರಾರಂಭಿಸುವ ಮೊದಲು, ನಿವೇಶನದಲ್ಲಿನ ಗುರುತುಗಳು ಯೋಜನೆಯ ಪ್ರಕಾರ ಇದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ನಿರ್ಮಾಣ ತಂಡವು ನಿವೇಶನವನ್ನು ಸಮತಟ್ಟಾಗಿಸಬೇಕು ಮತ್ತು ಅಡಿಪಾಯವನ್ನು ಹಾಕಲು ಗುಂಡಿಗಳು ಮತ್ತು ಕಂದಕಗಳನ್ನು ಅಗೆಯಬೇಕು.
ಕಾಂಕ್ರೀಟ್ ಅನ್ನು ಸುರಿದ ನಂತರ, ಅದು ಹೊಂದಿಕೆ ಆಗಲು ಬಿಡಬೇಕು ಮತ್ತು ನಂತರ ಸಂಪೂರ್ಣವಾಗಿ ಕ್ಯೂರ್ ಮಾಡಬೇಕಾಗುತ್ತದೆ. ಕ್ಯೂರ್ ಮಾಡಿದ ನಂತರ ಜಲನಿರೋಧಕ ಹಾಗೂ ಗೆದ್ದಲು-ನಿರೋಧಕ ಪ್ರಕ್ರಿಯೆಗಳನ್ನು ಮಾಡುವುದು ಉತ್ತಮ. ತೇವ ವಿರೋಧಿ ಪಾಯವನ್ನು ಹಾಕಲು ಅಲ್ಟ್ರಾಟೆಕ್ ILW ಅತ್ಯಂತ ಸೂಕ್ತವಾಗಿರುತ್ತದೆ. ನಂತರ, ನಿಮ್ಮ ತಂಡವು ಅಡಿಪಾಯದ ಗೋಡೆಗಳ ಸುತ್ತಲಿನ ಪ್ರದೇಶವನ್ನು ಮಣ್ಣಿನಿಂದ ತುಂಬಿಸಬೇಕಾಗುತ್ತದೆ.