Waterproofing methods, Modern kitchen designs, Vaastu tips for home, Home Construction cost

Get In Touch

Get Answer To Your Queries

Select a valid category

Enter a valid sub category

acceptence


ಟೊಳ್ಳು ಗೋಡೆಗಳ ಬಗ್ಗೆ 101 ಅಂಶಗಳು : ಅದರಿಂದ ಉಂಟಾಗುವ ಉಪಯೋಗ ಮತ್ತು ಅದನ್ನು ಯಾವ ಹಂತದಲ್ಲಿ ಬಳಕೆ ಮಾಡುತ್ತಾರೆ

ಟೊಳ್ಳು ಗೋಡೆ ಅಥವಾ ಕುಹರದ ಗೋಡೆ ಎಂದರೆ, ಎರಡು ಗೋಡೆಗಳನ್ನು ಸಮನಾಂತರವಾಗಿನ ಕಲ್ಲುಗಳ ಮಧ್ಯದಲ್ಲಿ ಅಂತರ ಅಥವಾ ಕ್ಯಾವಿಟಿ ಬಿಟ್ಟು ಕಟ್ಟುವುದಾಗಿದೆ. ಎರಡು ಪದರಗಳು ಅಥವಾ "ಸ್ಕಿನ್ " ಅನ್ನು ಇಟ್ಟಿಗೆಗಳಿಂದ ಅಥವಾ ಕಾಂಕ್ರೀಟ್ ಬ್ಲಾಕ್ ಗಳಿಂದ ಕಟ್ಟುತ್ತಾರೆ ಮತ್ತು ಮಧ್ಯದ ಅಂತರವನ್ನು ಲೋಹದ ಕಟ್ಟುಗಳಿಂದ ಕಟ್ಟಿ ಮುಚ್ಚುತ್ತಾರೆ. ಎರಡು ಕಲ್ಲಿನ ಪದರಗಳ ನಡುವಿನ ಕ್ಯಾವಿಟಿಯನ್ನು ಸಾಮಾನ್ಯವಾಗಿ ಇನ್ಸುಲೆಶನ್ ಮಟಿರಿಯಲ್ ಗಳಿಂದ ತುಂಬುತ್ತಾರೆ‌, ಇದು ಬಿಸಿಯಿಂದ ಆಗುವ ನಷ್ಟವನ್ನು ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ‌.

Share:


ಟೊಳ್ಳು ಗೋಡೆ ಎಂದರೆ ಏನು?

ಟೊಳ್ಳು ಗೋಡೆಗಳನ್ನು 19 ನೇ ಶತಮಾನದಲ್ಲಿ , ಸಂಪ್ರದಾಯಿಕ ಗಟ್ಟಿಯಾದ ಕಲ್ಲಿನ ಗೋಡೆಗಳ ಸಮಸ್ಯೆಗೆ ಪರ್ಯಾಯವಾಗಿ ಇದನ್ನು ಕಂಡುಹಿಡಿದರು. ಟೊಳ್ಳು ಗೋಡೆಗಳನ್ನು ಕಂಡುಹಿಡಿಯುವ ಮೊದಲು ಗಟ್ಟಿಯಾದ ಕಟ್ಟಡಗಳ ದಪ್ಪ ಗೋಡೆಗಳನ್ನು ಕಟ್ಟಲು ಇಟ್ಟಿಗೆ ಅಥವಾ ಕಲ್ಲುಗಳನ್ನು ಉಪಯೋಗಿಸುತ್ತಿದ್ದರು. ಇವುಗಳು ಕಟ್ಟಡದ ರಚನೆಗೆ ಉತ್ತಮವಾಗಿದ್ದವು ಆದರೆ, ತೇವಾಂಶದಿಂದ‌ ಗೋಡೆಗಳನ್ನು ಮತ್ತು ಕಟ್ಟಡವನ್ನು ಕಾಪಾಡಲು ಸಹಕಾರಿ‌ಯಾಗಿರಲಿಲ್ಲ. ಟೊಳ್ಳು ಗೋಡೆಗಳ ಉದ್ದೇಶವೆಂದರೆ ಇಟ್ಟಿಗೆಗಳ ಎರಡು ಪದರದ ನಡುವೆ ಅಂತರವನ್ನು ಬಿಟ್ಟು , ಅದನ್ನು ಇನ್ಸುಲೆಶನ್ ವಸ್ತುಗಳಿಂದ‌ ತುಂಬುವುದು. ಇದು ಶಾಖದಿಂದ ಉತ್ತಮ ಸುರಕ್ಷತೆಯನ್ನು ನೀಡುತ್ತದೆ ಮತ್ತು ಗೋಡೆಗಳು ತೇವಾಂಶವನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ.




ಟೊಳ್ಳು ಗೋಡೆಗಳ ಅನುಕೂಲಗಳು

ಟೊಳ್ಳು ಗೋಡೆಗಳು ಸಂಪ್ರದಾಯಿಕ ಗಟ್ಟಿ ಗೋಡೆಗಳಿಗಿಂತ ಹೆಚ್ಚಿನ ಅನುಕೂಲವನ್ನು ನೀಡುತ್ತವೆ. ಅವುಗಳೆಂದರೆ

 

1. ತೇವಾಂಶವನ್ನು ತಡೆಯುತ್ತದೆ.

ಆರೋಗ್ಯಕರವಾದ ಮಾತ್ತು ಬದುಕಲು ಅನುಕೂಲಕರವಾದ ವಾತಾವರಣವಿರುವಂತೆ ನೋಡಿಕೊಳ್ಳಲು ತೇವಾಂಶವನ್ನು ತಡೆಗಟ್ಟುವುದು ಅಗತ್ಯವಾದ ಅಂಶವಾಗಿದೆ. ಕಟ್ಟಡದಲ್ಲಿ ತೇವಾಂಶವು ಹಲಾವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ ಮುಖ್ಯವಾಗಿ ಶೀಲಿಂದ್ರಗಳ ಬೆಳವಣಿಗೆಯಾಗುತ್ತದೆ ಮತ್ತು ಕಟ್ಟಡದ ರಚನೆಗೂ ಧಕ್ಕೆ ತರುತ್ತವೆ. ಅದಕ್ಕಾಗಿಯೇ ಪೂರ್ವಭಾವಿಯಾಗಿ ತೇವಾಂಶ ಬರದಂತೆ ಕಾಪಾಡುವುದು ತುಂಬಾ ಮುಖ್ಯವಾಗುತ್ತದೆ.

2. ಉಷ್ಣ ನಿರೋಧಕ

ಉಷ್ಣ ನಿರೋಧಕ ಎಂದರೆ ಒಂದು ವಸ್ತು‌ ಅಥವಾ ತಂತ್ರಜ್ಞಾನವಾಗಿದೆ. ಇದು ಎರಡು ಮೇಲ್ಮೈಗಳ ಅಥವಾ ಬೇರೆ ಬೇರೆ ಶಾಖಗಳುಳ್ಳ ಜಾಗದ ನಡುವೆ ಶಾಖದ ವರ್ಗಾವಣೆಯನ್ನು ತಡೆಯುತ್ತದೆ. ಇದು ಕಟ್ಟಡದ ವಿನ್ಯಾಸದ ಪ್ರಮುಖ ಅಂಶವಾಗಿದೆ, ಏಕೆಂದರೆ ಇದು ಒಳಾಂಗಣದ ಶಾಖವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಶಕ್ತಿಯ ಉಳಿತಾಯದೊಂದಿಗೆ ಸುಖದ ಮಟ್ಟವನ್ನು ಹೆಚ್ಚಿಸುತ್ತದೆ.

 

3. ಶಬ್ಧ ನಿರೋಧಕ

>ಶಬ್ದ ನಿರೋಧಕವನ್ನು ಅಕೌಸ್ಟಿಕ್ ಇನ್ಸುಲೇಶನ್ ಅಥವಾ ಧ್ವನಿನಿರೋಧಕ ಎಂದು ಸಹ ಕರೆಯುತ್ತಾರೆ. ಇದು ಎರಡು ಜಾಗಗಳ‌ ನಡುವೆ ಶಬ್ಧದ ಓಡಾಟವನ್ನು ನಿಯಂತ್ರಿಸುತ್ತದೆ. ಶಬ್ದ ನಿರೋಧಕವು ವಸತಿ ಹಾಗೂ ವಾಣಿಜ್ಯ ಕಟ್ಟಡಗಳಿಗೆ ತುಂಬಾ ಮುಖ್ಯವಾಗುತ್ತವೆ‌. ಏಕೆಂದರೆ ಇದು ಗೌಪ್ಯತೆಯನ್ನು ಕಾಪಾಡಿಕೊಳ್ಳಲು, ಶಬ್ದಮಾಲಿನ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಸುಖವನ್ನು ಹೆಚ್ಚಿಸುತ್ತದೆ.

 

4. ನೆಲದ ಮೇಲೆ ಕಲೆಯಾಗುವುದರಿಂದ ರಕ್ಷಣೆ

ನೆಲ ಅಥವಾ ಗೋಡೆಗಳ ಮೇಲೆ ಬಿಳಿ ಅಥವಾ ಬೂದುಬಣ್ಣದ ಕಲೆ ಉಳಿದುಕೊಳ್ಳುವುದು ಒಂದು ಸಾಮಾನ್ಯ ಸಮಸ್ಯೆಯಾಗಿದೆ. ನೀರಿನಲ್ಲಿ ಕರಗುವ ಲವಣಗಳು ಮತ್ತು ಇತರ ವಸ್ತುಗಳು ಕಾಂಕ್ರೀಟ್ ಅಥವಾ ಕ್ಲಲಿನ ಮೇಲ್ಮೈ ಮೇಲೆ ಬಿದ್ದಾಗ ಅದು ಬಿಳಿಯ ಅಥವಾ ಬೂದು ಬಣ್ಣದ ಪುಡಿಯಾದ ವಸ್ತುವಾಗಿ ಮಾರ್ಪಾಟಾಗಿ ಉಳಿಯುವುದರಿಂದ ಆಗುತ್ತದೆ . ಇದು ನೋಡಲು ಕೆಟ್ಟದಾಗಿ ಕಾಣುವುದಲ್ಲದೆ, ಕಾಲಾಂತರದಲ್ಲಿ ನೆಲದ ಮೇಲ್ಮೈ ಯನ್ನು ಸಹ ಹಾಳು ಮಾಡುತ್ತದೆ.

 

ಮತ್ತು ಹಲವಾರು ಉಪಯೋಗಗಳು ಕೆಳಗಿನಂತಿವೆ:

 

  • ಬಾಳಿಕೆಯನ್ನು ಹಚ್ಚಿಸುತ್ತದೆ:

    ಟೊಳ್ಳು ಗೋಡೆಗಳಲ್ಲಿ ಕಲ್ಲಿನ‌ ಎರಡು ಪದರಗಳ ನಡುವೆ ಅಂತರವನ್ನು ತುಂಬಲು ಬಳಸುವ ಲೋಹದ ಕಟ್ಟುಗಳು ಹೆಚ್ಚಿನ ಸಾಮರ್ಥ್ಯ ವನ್ನು ಮತ್ತು ಸ್ಥಿರತೆಯನ್ನು ನೀಡಿ ಕಟ್ಟಡಕ್ಕೆ ಬಿರುಕುಗಳು ಮತ್ತು ಹಲವು ಸಮಸ್ಯೆಗಳು ಬರದಂತೆ ಕಾಪಾಡುತ್ತವೆ.

 

  • ಬೇಕಾದ ಹಾಗೆ ಕಟ್ಟಡವನ್ನು ವಿನ್ಯಾಸಗೊಳಿಸಬಹುದು

    ಇಟ್ಟ್ಟಿಗೆ ,ಕಾಂಕ್ರೀಟ್ ಬ್ಲಾಕ್ ಮತ್ತು ಕಲ್ಲುಗಳು ಮುಂತಾದ ಹಲವು ಬಗೆಯ ವಸ್ತುಗಳಿಂದ ಟೊಳ್ಳು ಗೋಡೆ ಗಳನ್ನು ಕಟ್ಟುತ್ತಾರೆ. ಇದು ಕಟ್ಟಡ ವಿನ್ಯಾಸಕಾರರಿಗೆ ಮತ್ತು ಬಿಲ್ಡರ್ ಗಳಿಗೆ ಬೇಕಾದಂತೆ ಕಟ್ಟಡವನ್ನು ವಿನ್ಯಾಸಗೊಳಿಸಲು‌ ಸಹಾಯ ಮಾಡುತ್ತದೆ.

 

  • ದೀರ್ಘ ಕಾಲದ ವರೆಗೆ ಬಾಳಿಕೆ‌ಬರುತ್ತದೆ

    ಟೊಳ್ಳು ಗೋಡೆಗಳು ದಶಕಗಳವರೆಗೆ ಕಡೆಮೆ ನಿರ್ವಹಣೆಯೊಂದಿಗೆ ಹೆಚ್ಚು ಬಾಳಿಕೆ ಬರುತ್ತವೆ.

 

ಒಟ್ಟಾಗಿ ಟೊಳ್ಳು ಗೋಡೆಗಳಿಂದಾಗುವ ಉಪಯೋಗದಿಂದ ಇದು ಹೆಚ್ಚು ಪ್ರಸಿದ್ದವಾಗಿದೆ. ವಸತಿನಿಲಯ ಹಾಗೂ ವಾಣಿಜ್ಯ ಕಟ್ಟಡಗಳ‌ ನಿರ್ಮಾಣಕ್ಕು ಸಹ ಉಪಯುಕ್ತವಾಗಿದೆ. ತೇವಾಂಶವನ್ನು ತಡೆಗಟ್ಟಿ, ಹೆಚ್ಚು ಬಾಳಿಕೆ ಬರುವ, ಶಾಖದ ನಿರೊಧಕವನ್ನು ಹೆಚ್ಚಿಸಿ, ಶಬ್ದ ನಿರೊಧಕವಾಗಿ ಮತ್ತು ಬೇಕಾದ ಹಾಗೆ ವಿನ್ಯಾಸವನ್ನು ಮಾಡಲು‌ ಅನುಕೂಲವಾಗಿರುವುದರಿಂದ ಕ್ಯಾವಿಟಿ ಗೋಡೆಗಳು ಹೆಚ್ಚು ಆರಾಮದಾಯಕ ಜೀವಿಸುವ, ಧಕ್ಷ , ಬಾಳಿಕೆ ಬರುವ ಕಟ್ಟಡದ ನಿರ್ಮಾಣಕ್ಕೆ ಸಹಾಯಕವಾಗಿದೆ.





ಟೊಳ್ಳು ಗೋಡೆಗಳನ್ನು ಎಲ್ಲಿ ಕಟ್ಟಬೇಕು?


ಟೊಳ್ಳು ಗೋಡೆಗಳು ಎಂದರೆ ಎರಡು ಪದರದಲ್ಲಿ ಕಲ್ಲಿನ ಗೋಡೆಗಳನ್ನು ಮಧ್ಯದಲ್ಲಿ ಅಂತರ ಇರುವಂತೆ ಕಟ್ಟುವುದು. ಮಧ್ಯದ ಅಂತರವನ್ನು ಸಾಮಾನ್ಯವಾಗಿ ಇನ್ಸುಲೇಶನ್‌ ವಸ್ತುಗಳಿಂದ ತುಂಬಿಸಲಾಗುತ್ತದೆ ಮತ್ತು ಇದು‌ ಶಕ್ತಿಯ ಧಕ್ಷತೆಯನ್ನು ಹೆಚ್ಚಿಸುತ್ತದೆ, ಶಬ್ದ ಹರಡುವಿಕೆಯನ್ನು ಹೆಚ್ಚಿಸುತ್ತದೆ. ಟೊಳ್ಳು ಗೋಡೆಗಳನ್ನು ಹೆಚ್ಚಾಗಿ ವಸತಿ ಮತ್ತು ವಾಣಿಜ್ಯ ಕಟ್ಟಡಗಳನ್ನು ಕಟ್ಟಲು ಬಳಸಲಾಗುತ್ತದೆ. ಕಟ್ಟಡಗಳನ್ನು ಎಲ್ಲಿ‌ಬೇಕಾದರೂ , ಪ್ರದೇಶದ ಆಧಾರದ ಮೇಲೆ‌ ಬೇಕಾದ ಹಾಗೆ ವಿನ್ಯಾದ ಮತ್ತು ಉಳಿದ ಅವಶ್ಯಕತೆಗೆ ತಕ್ಕಂತೆ ಕಟ್ಟಬಹುದು.

 

ಟೊಳ್ಳು ಗೋಡೆಗಳನ್ನು ಈ ಕೆಳಗಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಟ್ಟಲಾಗುತ್ತದೆ.

 

 

1. ಗೋಡೆ ಮತ್ತು ಕಿಟಕಿಯ ಮಾರ್ಗದಲ್ಲಿ ಟೊಳ್ಳು ಗೋಡೆಗಳನ್ನು ಕಟ್ಟಲಾಗುತ್ತದೆ.

ಟೊಳ್ಳು ಗೋಡೆಗಳನ್ನು ಕಟ್ಟುವಾಗ ಕಿಟಕಿ ಮತ್ತು ಗೋಡೆಗಳ ನಡುವಿನ ಅಂತರಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಏಕೆಂದರೆ ಟೊಳ್ಳು ಗೋಡೆಗಳು ತಮ್ಮ ವಿಶೇಷತೆಗಳಾದ ಇನ್ಸುಲೇಶನ್ , ಹವಾಮಾನ ವೈಪರೀತ್ಯ ನಿರೋಧಕ ಹಾಗೂ ಕಟ್ಟಡದ ಪ್ರಾಬಲ್ಯವನ್ನು ಹಾಗೆ ಉಳಿಸಿಕೊಳ್ಳಲು ಹೆಚ್ಚಿನ ಕಾಳಜಿ ನೀಡಬೇಕಾಗುತ್ತದೆ.

 

2. ಛಾವಣಿಗೆ ಟೊಳ್ಳು ಗೋಡೆಗಳು

ಛಾವಣಿಗಳನ್ನು ಕಟ್ಟಲೂ ಕ್ಯಾವಿಟಿ ಗೋಡೆಗಳನ್ನು ಬಳಸಬಹುದು . ಇದು ಇನ್ಸುಲೇಶನ್ , ಶಬ್ದ ನಿರೋಧಕವನ್ನು ಮತ್ತು ಕಟ್ಟಡದ ಸಾಮರ್ಥ್ಯ ವನ್ನು ಹೆಚ್ಚಿಸುತ್ತದೆ. ವಿಷೇಶವಾಗಿ ಛಾವಣಿಯನ್ನು ರಾಪ್ಟರ್ ಗಳ ಮಧ್ಯದಲ್ಲಿ ಕಟ್ಟಲಾಗುತ್ತದೆ ಮತ್ತು ಸುತ್ತುವರೆದ ರೀತಿಯ ರಚನೆಯನ್ನು ಕಟ್ಟಿ ಮಧ್ಯದಲ್ಲಿ ಇರುವ ಅಂತರವನ್ನು ಇನ್ಸುಲೆಶನ್ ವಸ್ತುಗಳಿಂದ ತುಂಬಲಾಗುತ್ತದೆ. ಇದು ಶಾಖವನ್ನು ಕಡಿಮೆ ಮಾಡಲು ಮತ್ತು ಶಕ್ತಿಯ ಧಕ್ಷತೆಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ.

 

3.ಪ್ಯರಾಪೆಟ್ ಗಳಿಗೆ ಟೊಳ್ಳು ಗೋಡೆಗಳು

ಕೆಳಗಿನ ಗೋಡೆ ಅಥವಾ ಕಟ್ಟಡದ ಮೇಲ್ಛಾವಣಿ ಗಿಂತ ಮೇಲೆ ಹೋದ ರೇಲಿಂಗ್ ಗಳಿಗೆ ಪ್ಯಾರಾಫೆಟ್ ಗೋಡೆಗಳು ಎನ್ನುತ್ತಾರೆ. ಟೊಳ್ಳು ಗೋಡೆಗಳನ್ನು ಪ್ಯಾರಾಫೆಟ್ ಗಳನ್ನು ಕಟ್ಟುವಾಗ ಉಪಯೋಗಿಸುವುದರಿಂದ ಇನ್ಸುಲೇಶನ್, ಶಬ್ದ ನಿರೋಧಕವನ್ನು‌ ಮತ್ತು ಕಟ್ಟಡದ ರಚನೆಗೆ ಗಟ್ಟಿತನವನ್ನು ನೀಡುತ್ತದೆ. ಟೊಳ್ಳು ಗೋಡೆಗಳನ್ನು ಪ್ಯಾರಾಫೆಟ್ ಗಳಲ್ಲಿ ಒಳಗೆ ಮತ್ತು ಹೊರಗಿನ ಗೋಡೆಯ ಪದರದ ನಡುವೆ ಅಂತರ ಬರುವಂತೆ ನಿರ್ಮಿಸಲಾಗುತ್ತದೆ. ಈ ಅಂತರವು ಇನ್ಸುಲೆಶನ್‌ ಮೆಟಿರಿಯಲ್‌ ನಿಂದ ತುಂಬಲಾಗುತ್ತದೆ. ಇದು ಕಟ್ಟಡದಲ್ಲಿ ಶಾಖ ನಷ್ಟವನ್ನು ತಡೆಯಲು ಮತ್ತು ಶಕ್ತಿಯನ್ನು ಧಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ

 



ನಿರ್ಣಾಯಕವಾಗಿ ಹೇಳುವುದೆಂದರೆ , ಟೊಳ್ಳು ಗೋಡೆಗಳು ಕಟ್ಟಡ ನಿರ್ಮಾಣದಲ್ಲಿ ಹಲವಾರು ರೀತಿಯ ಲಾಭವನ್ನು ನೀಡುತ್ತದೆ. ಶಾಖ ನಿರೊಧಕ, ಶಬ್ದ ನಿರೊಧಕ, ಕಟ್ಟಡಕ್ಕೆ ಸಾಮರ್ಥ್ಯ ನೀಡವುದರಿಂದ , ಇದು ಈಗ ಆಧುನಿಕ ಕಟ್ಟಡ ನಿರ್ಮಾಣದ ಜನಪ್ರಿಯ ಆಯ್ಕೆಯಾಗಿದೆ. ಕಟ್ಟಡದ ವಿವಿಧ ಭಾಗಗಳಲ್ಲಿ ಟೊಳ್ಳು ಗೋಡೆಗಳನ್ನು ನಿರ್ಮಾಣ ಮಾಡಬಹುದು. ಉದಾಹರಣೆಗೆ ಛಾವಣಿ, ಪ್ಯಾರಾಫೆಟ್ ಗೋಡೆಗಳು, ಬಾಗಿಲುಗಳು ಅಥವಾ ಕಿಟಕಿಯ ಆರಂಭಗಳಲ್ಲಿ ಉಪಯೊಗಿಸುವುದರಿಂದ ಶಕ್ತಿಯ ಧಕ್ಷತೆ ಮತ್ತು ಉಷ್ಣತೆವನ್ನು ಕಾಪಾಡುತ್ತದೆ. ಟೊಳ್ಳು ಗೋಡೆಗಳನ್ನು ಕಟ್ಟಲು ಸರಿಯಾದ ಕಟ್ಟಡ ನಿರ್ಮಾಣ ವಸ್ತುಗಳು, ಇನ್ಸುಲೇಶನ್, ವೆಂಟಿಲೇಶನ್, ಫ್ಲ್ಯಾಶಿಂಗ್ ಮತ್ತು ಬೆಂಕಿಯಿಂದ ರಕ್ಷಣೆ ಇವುಗಳು ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕು. ಟೊಳ್ಳು ಗೋಡೆಗಳನ್ನು ಬಳಸುವುದರಿಂದ ನಾವು ನೆಮ್ಮದಿಯಿಂದ ಬದುಕುವ ಹಾಗೂ ಪರಿಣಾಮಕಾರಿಯಾಗಿ ಕೆಲಸಮಾಡುವ ಜಾಗಗಳನ್ನು ಬಾಳಿಕೆ ಬರುವಂತೆ ಮತ್ತು ಕಡಿಮೆ ಖರ್ಚಿನಲ್ಲಿ‌ ಕಟ್ಟಬಹುದು.



ಸಂಬಂಧಿತ ಲೇಖನಗಳು



ಶಿಫಾರಸು ಮಾಡಿದ ವೀಡಿಯೊಗಳು



  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....