Share:
Home Building Guide
Our Products
Useful Tools
Product
UltraTech Building Products
Waterproofing Systems
Crack Filler
Style Epoxy Grout
Tile & Marble Fitting System
Waterproofing methods, Modern kitchen designs, Vaastu tips for home, Home Construction cost
Share:
ಬೇಸ್ಮೆಂಟ್ನಲ್ಲಿ ತೇವಾಂಶವನ್ನು ಉಂಟುಮಾಡುವ ಪ್ರಮುಖ ಅಂಶವೆಂದರೆ ಫೌಂಡೇಶನ್ ಅಥವಾ ಗೋಡೆಗಳಲ್ಲಿನ ಬಿರುಕುಗಳ ಮೂಲಕ ನೀರು ಜಿನುಗುವುದು. ಇದು ಕಟ್ಟಡದ ಸುತ್ತಮುತ್ತಲಿನ ಮಣ್ಣು ಅಥವಾ ಕಳಪೆ ಒಳಚರಂಡಿ ವ್ಯವಸ್ಥೆಯಿಂದ ಉಂಟಾಗುವ ಹೈಡ್ರೋಸ್ಟಾಟಿಕ್ ಒತ್ತಡದಿಂದಾಗಿ ಉಂಟಾಗಬಹುದು.
ಬೇಸ್ಮೇಂಟ್ನಲ್ಲಿ ಉಂಟಾಗುವ ತೇವಾಂಶಕ್ಕೆ ಮತ್ತೊಂದು ಸಾಮಾನ್ಯ ಕಾರಣವೆಂದರೆ ಮನೆಯ ಸುತ್ತಲೂ ಅಸಮರ್ಪಕವಾಗಿರುವ ಹರಡಿಕೊಂಡಿರುವ ಮಣ್ಣು ಮತ್ತು ಒಳಚರಂಡಿ ವ್ಯವಸ್ಥೆಗಳು. ಮನೆಯ ಫೌಂಡೇಶನ್ ಸುತ್ತಲಿನ ಮಣ್ಣು ನೀರು ಸಾರಾಗವಾಗಿ ಹರಿದು ಹೋಗುವಂತೆ ಇಳಿಜಾರಾಗಿ ಇಲ್ಲದಿದ್ದರೆ ಅಥವಾ ಅಸಮರ್ಪಕ ಒಳಚರಂಡಿ ವ್ಯವಸ್ಥೆ ಇದ್ದಲ್ಲಿ, ನೀರು ಸೋರಿಕೆಯಾಗುತ್ತದೆ ಮತ್ತು ಬೇಸ್ಮೆಂಟ್ನಲ್ಲಿ ಶೇಖರಣೆಯಾಗುತ್ತದೆ.
ಕಳಪೆಯಾಗಿ ನಿರ್ಮಾಣ ಮಾಡಿರುವ ಮತ್ತು ಸರಿಯಾಗಿ ನೋಡಿಕೊಳ್ಳದ ಗಟಾರಗಳು ಕೂಡ ಬೇಸ್ಮೆಂಟ್ನಲ್ಲಿ ತೇವಾಂಶದ ಸಮಸ್ಯೆಗಳಿಗೆ ಕಾರಣವಾಗಬಹುದು. ಮುಚ್ಚಿಹೋಗಿರುವ ಅಥವಾ ಸರಿಯಾಗಿ ನೋಡಿಕೊಳ್ಳದ ಗಟಾರಗಳಿಂದ ನೀರು ಮೇಲೆ ಬಂದು ಮತ್ತು ಫೌಂಡೇಶನ್ ಸುತ್ತಲೂ ಸಂಗ್ರಹವಾಗಲು ಕಾರಣವಾಗಬಹುದು, ಇದು ಬೇಸ್ಮೆಂಟ್ನಲ್ಲಿ ನೀರಿನಿಂದ ಉಂಟಾಗುವ ಹಾನಿಗೆ ಕಾರಣವಾಗುತ್ತದೆ.
ಬೇಸ್ಮೆಂಟ್ನಲ್ಲಿ ತೇವಾಂಶ ಉಂಟಾಗುವ ಸಮಸ್ಯೆಗಳಿಗೆ ಘನೀಕರಣವು ಪ್ರಮುಖ ಕೊಡುಗೆಯಾಗಿದೆ. ಬಿಸಿಯಾದ, ತೇವವಾದ ಗಾಳಿಯು ಗೋಡೆಗಳು ಅಥವಾ ಪೈಪ್‌ಗಳಂತಹ ತಂಪಾದ ಮೇಲ್ಮೈಗಳೊಂದಿಗೆ ಸಂಪರ್ಕಕ್ಕೆ ಬಂದಾಗ ಮತ್ತು ನೀರಿನ ಹನಿಗಳಾಗಿ ಘನೀಕರಣಗೊಂಡಾಗ ಇದು ಉಂಟಾಗುತ್ತದೆ. ಚೆನ್ನಾಗಿ ಗಾಳಿ-ಬೆಳಕಿನ ವ್ಯವಸ್ಥೆ ಹೊಂದಿಲ್ಲದ ಅಥವಾ ಅಸಮರ್ಪಕ ಇನ್ಸುಲೇಶನ್ ಮಾಡಿರುವ ಬೇಸ್ಮೆಂಟ್ನಲ್ಲಿ ಘನೀಕರಣವು ವಿಶೇಷವಾಗಿ ಸಮಸ್ಯೆಯನ್ನುಂಟು ಮಾಡುತ್ತದೆ.
ಫೌಂಡೇಶನ್ ಸುತ್ತಲೂ ನೀರು ಹರಿದು ಹೋಗದಂತೆ ಇರುವ ಅಸಮರ್ಪಕ ಇಳಿಜಾರು ಮತ್ತು ಬೇಸ್ಮೆಂಟ್ನ ಗೋಡೆಗಳು ಅಥವಾ ಮಹಡಿಗಳಲ್ಲಿನ ಬಿರುಕುಗಳು ತೇವಾಂಶದ ಸಮಸ್ಯೆಗಳಿಗೆ ಕಾರಣವಾಗಬಹುದು. ಫೌಂಡೇಶನ್ ಸುತ್ತಲಿನ ಮಣ್ಣುನ್ನು ಇಳಿಜಾರಾಗಿ ಹಾಕಿರದಿದ್ದರೆ, ನೀರು ಶೇಖರಣೆಯಾಗುತ್ತದೆ ಮತ್ತು ಆ ನೀರು ಬೇಸ್ಮೆಂಟ್ಗೆ ಇಳಿಯಬಹುದು. ಫೌಂಡೇಶನ್ ಅಥವಾ ಗೋಡೆಗಳಲ್ಲಿನ ಬಿರುಕುಗಳು ನೀರನ್ನು ಒಳಗೆ ಹರಿಯಲು ಅವಕಾಶ ಮಾಡಿಕೊಡುತ್ತದೆ, ಇದು ಬೇಸ್ಮೆಂಟ್ನಲ್ಲಿ ನೀರಿನ ಹಾನಿಗೆ ಕಾರಣವಾಗುತ್ತದೆ.
ಬೇಸ್ಮೆಂಟ್ನ ಗೋಡೆಗಳು ಮತ್ತು ಮಹಡಿಗಳ ಒಳಭಾಗಕ್ಕೆ ಇಂಟೀರಿಯರ್ ಸೀಲಾಂಟ್ಗಳನ್ನು ಅನ್ನು ಹಚ್ಚುವುದು ಬೇಸ್ಮೆಂಟ್ ವಾಟರ್‌ಪ್ರೂಫಿಂಗ್ ವಿಧಾನದ ಮತ್ತೊಂದು ಬಗೆಯಾಗಿದೆ. ಬಿರುಕುಗಳು, ಸಂದುಗಳಿಂದ ಅಥವಾ ಪೊರಸ್ ಕಾಂಕ್ರೀಟ್ ಮೂಲಕ ನೀರು ಬೇಸ್ಮೆಂಟ್ಗೆ ಹರಿಯುತ್ತದೆ, ಇಂಥ ಸ್ಥಳಗಳಲ್ಲಿ ವಿಶೇಷವಾಗಿ ಮೇಲ್ಮಟ್ಟದಲ್ಲಿರುವ ಅಂತರ್ಜಲದ ಒತ್ತಡ ಅಥವಾ ಕಳಪೆ ಒಳಚರಂಡಿ ವ್ಯವಸ್ಥೆ ಹೊಂದಿರುವುದರಿಂದ ಈ ಸಮಸ್ಯೆ ಎದುರಾಗುತ್ತದೆ. ಇದು ನೀರಿನಿಂದಾಗುವ ಹಾನಿ ಮತ್ತು ಬೂಷ್ಟು ಬೆಳೆಯಲು ಕಾರಣವಾಗಬಹುದು, ಜೊತೆಗೆ ಕಟ್ಟಡದ ಫೌಂಡೇಶನ್ ಮತ್ತು ಸ್ಟ್ರಕ್ಚರ್ನ ಸದೃಢತೆಗೂ ಹಾನಿಯನ್ನುಂಟು ಮಾಡುತ್ತದೆ. ಬೇಸ್ಮೆಂಟ್ನ ಗೋಡೆಗಳು ಮತ್ತು ನೆಲದ ಒಳಭಾಗದಲ್ಲಿ ವಾಟರ್ಪ್ರೂಫ್ ತಡೆಗೋಡೆಯನ್ನು ರಚಿಸುವ ಮೂಲಕ ಇಂಟೀರಿಯರ್ ಸೀಲೆಂಟ್‌ಗಳು ಬೇಸ್ಮೆಂಟ್ಗೆ ನೀರನ್ನು ಸೋರಿಕೆಯಾಗದಂತೆ ತಡೆಯುತ್ತವೆ. ಈ ಸೀಲಾಂಟ್ ತಡೆಗೋಡೆ ನಿರ್ಮಿಸಿ, ಕಾಂಕ್ರೀಟ್ ಮೂಲಕ ನೀರು ಹರಿಯುವುದನ್ನು ತಡೆಯುತ್ತದೆ. ಆದರೂ, ಈ ವಿಧಾನವು ನೀರಿನಿಂದಾಗುವ ಕಡಿಮೆ ಹಾನಿಗೆ ಮಾತ್ರ ಪರಿಣಾಮಕಾರಿಯಾಗಿದೆ ಮತ್ತು ತೇವಾಂಶದಿಂದ ಎದುರಾಗಿರುವ ಸಮಸ್ಯೆಗಳ ಮೂಲ ಕಾರಣಗಳನ್ನು ಪರಿಹರಿಸುವುದಿಲ್ಲ.
ಫೌಂಡೇಶನ್ ಗೋಡೆಗಳ ಹೊರಗಿನಿಂದ ನೀರು ಒಳಕ್ಕೆ ಜಿನುಗುವುದು ಎಕ್ಸ್ಟೀರಿಯರ್ ಬೇಸ್ಮೆಂಟ್ ವಾಟರ್‌ಪ್ರೂಫಿಂಗ್ ಮಾಡಲು ಮುಖ್ಯ ಕಾರಣವಾಗಿದೆ. ಫೌಂಡೇಶನ್ನ ಹೊರಭಾಗದ ಸುತ್ತಲೂ ನೆಲವನ್ನು ಅಗೆದು, ಗೋಡೆಗಳ ಹೊರಭಾಗಕ್ಕೆ ವಾಟರ್ಪ್ರೂಫ್ ಕೋಟಿಂಗ್ ಮಾಡುವುದು ಅಥವಾ ಮೆಂಬರೇನ್ ಹಚ್ಚುವುದನ್ನು ಎಕ್ಸ್ಟೀರಿಯರ್ ಬೇಸ್ಮೆಂಟ್ ವಾಟರ್‌ಪ್ರೂಫಿಂಗ್ ಎನ್ನುತಾರೆ. ನೀರಿನಿಂದಾಗುವ ಹಾನಿಯನ್ನು ತಡೆಯಲು ಮತ್ತು ಕಟ್ಟಡದ ಸ್ಟ್ರಕ್ಚರ್ನ ದೃಢತೆಯನ್ನು ಕಾಪಾಡಿಕೊಳ್ಳಲು ಇದು ಪರಿಣಾಮಕಾರಿ ಪರಿಹಾರವಾಗಿದೆ. ಆದರೂ, ಇದನ್ನು ಮಾಡುವುದು ಖರ್ಚಿನ ಕೆಲಸ ಜೊತೆಗೆ ಇದನ್ನು ಮಾಡಲು ಹಲವು ಅಡ್ಡಿಗಳು ಎದುರಾಬಹುದು. ಯಾಕೇಂದರೆ ಕಟ್ಟಡದ ಫೌಂಡೇಶನ್ ಸುತ್ತಲೂ ನೆಲವನ್ನು ಅಗೆದು ಎಕ್ಸ್ಟೀರಿಯರ್ ಬೇಸ್ಮೆಂಟ್ ವಾಟರ್‌ಪ್ರೂಫಿಂಗ್ ಮಾಡಬೇಕಾಗುತ್ತದೆ. ಜೊತೆಗೆ ವಾಟರ್‌ಪ್ರೂಫಿಂಗ್ ಮಾಡುವುದು ಮುಗಿದ ನಂತರವೂ ಫೌಂಡೇಶನ್ ಪಕ್ಕದಲ್ಲಿ ಭೂಮಿಯಲ್ಲಿ ಇತರ ರಿಪೇರಿಗಳನ್ನು ಮಾಡುವುದನ್ನೂ ಇದು ಒಳಗೊಂಡಿದೆ. ಅದೇನೇ ಇದ್ದರೂ, ಬೇಸ್ಮೆಂಟ್ನಲ್ಲಿ ನೀರಿನ ಜಿನುಗುವಿಕೆಯನ್ನು ತಡೆಯಲು ಈ ವಿಧಾನವು ಅತ್ಯಂತ ವಿಶ್ವಾಸಾರ್ಹ ಹಾಗೂ ದೀರ್ಘಕಾಲೀನ ಪರಿಹಾರವಾಗಿದೆ.
ಬೇಸ್ಮೆಂಟ್ನಲ್ಲಿ ನೀರು ಸಂಗ್ರಹವಾಗಲು ತೇವಾಂಶವು ಮುಖ್ಯ ಕಾರಣವಾದಾಗ ಇಂಟೀರಿಯರ್ ಬೇಸ್ಮೆಂಟ್ ವಾಟರ್‌ಪ್ರೂಫಿಂಗ್ ಮಾಡುವುದು ಅಗತ್ಯವಾಗುತ್ತದೆ. ಗೋಡೆಗಳು ಅಥವಾ ನೆಲದ ಮೂಲಕ ಬೇಸ್ಮೆಂಟ್ಗೆ ಇಳಿಯುವ ನೀರನ್ನು ಒಳಚರಂಡಿಗೆ ಸಾಗಿಸುವ ಕೆಲಸವನ್ನು ಇಂಟೀರಿಯರ್ ಬೇಸ್ಮೆಂಟ್ ವಾಟರ್‌ಪ್ರೂಫಿಂಗ್ ವ್ಯವಸ್ಥೆ ಮಾಡುತ್ತದೆ. ಹೀಗೆ ಮಾಡಲು ಬೇಸ್ಮೆಂಟ್ನಲ್ಲಿ ಅಳವಡಿಸುವ ಸಂಪ್ ಪಂಪ್ ಅನ್ನು ಬಳಸಿಕೊಂಡು ನೀರನ್ನು ಹೊರಗೆ ಪಂಪ್ ಮಾಡಲಾಗುತ್ತದೆ. ಇಳಿಜಾರನ್ನು ಸೃಷ್ಟಿಸಿ ಒಳಚರಂಡಿ ಪೈಪ್ ಅನ್ನು ಸಾಮಾನ್ಯವಾಗಿ ಬೇಸ್ಮೆಂಟ್ನ ನೆಲದ ಕೆಳಗೆ ಹಾಕಲಾಗಿರುತ್ತದೆ. ಇದನ್ನು ಬೇಸ್ಮೆಂಟ್ನಲ್ಲಿ ಇಳಿಜಾರಿನಲ್ಲಿ ಪಿಟ್‌ನಲ್ಲಿ ಅಳವಡಿಸಲಾಗುತ್ತದೆ. ಪಿಟ್‌ನಲ್ಲಿನ ನೀರಿನ ಮಟ್ಟವು ಒಂದು ನಿರ್ದಿಷ್ಟ ಹಂತವನ್ನು ತಲುಪಿದಾಗ ಸ್ವಯಂಚಾಲಿತವಾಗಿ ಆನ್ ಆಗುವಂತೆ ಸಂಪ್ ಪಂಪ್ ಅನ್ನು ವಿನ್ಯಾಸಗೊಳಿಸಲಾಗಿದ್ದು, ಅದು ಬೇಸ್ಮೆಂಟ್ನಿಂದ ಅಲ್ಲಿ ಸಂಗ್ರಹವಾಗುವ ನೀರನ್ನು ಪಂಪ್ ಮಾಡುತ್ತದೆ.
ಫೌಂಡೇಶನ್ ಸುತ್ತಲೂ ಮಣ್ಣನ್ನು ಅಗೆಯದೆಯೇ, ಒಳಗಿನಿಂದ ಫೌಂಡೇಶನ್ ಗೋಡೆಗಳಲ್ಲಿನ ಬಿರುಕುಗಳನ್ನು ಸರಿಪಡಿಸುವ ವಿಧಾನವು ಫೌಂಡೇಶನ್ ಬಿರುಕು ಇಂಜೆಕ್ಷನ್ಗಳನ್ನು ಮಾಡುವುದಾಗಿದೆ. ಈ ಪ್ರಕ್ರಿಯೆಯ ಮೂಲಕ ಬಿರುಕುಗಳಿಗೆ ದ್ರವರೂಪದ ಪಾಲಿಯುರೆಥೇನ್ ಅಥವಾ ಎಪಾಕ್ಸಿಯನ್ನು ಸೇರಿಸಲಾಗುತ್ತದೆ. ಹೀಗೆ ಸೇರಿಸಿದ ನಂತರ ಅದು ಗಟ್ಟಿಯಾಗಿ ವಾಟರ್ಪ್ರೂಫ್ ತಡೆಗೋಡೆಯನ್ನು ಸೃಷ್ಟಿಸುತ್ತದೆ, ಜೊತೆಗೆ ಅದು ನೀರು ಒಳಗೆ ಬರದಂತೆ ತಡೆಯುತ್ತದೆ. ಈ ವಿಧಾನವನ್ನು ವಿಶೇಷವಾಗಿ ಸಣ್ಣ ಬಿರುಕುಗಳಿಗೆ ಬಳಸಲಾಗುತ್ತದೆ, ಇಷ್ಟೇ ಅಲ್ಲ ಇದು ಕಟ್ಟಡದ ಸ್ಟ್ರಕ್ಚರ್ಗೆ ಯಾವುದೇ ಅಫಾಯವನ್ನುಂಟು ಮಾಡುವುದಿಲ್ಲ ಮತ್ತು ಕಟ್ಟಡದ ನಿವಾಸಿಗಳಿಗೆ ತೊಂದರೆ ಆಗದಂತೆ ತ್ವರಿತವಾಗಿ ಮತ್ತು ಕಡಿಮೆ ಅಡಚಣೆಗಳೊಂದಿಗೆ ಇದನ್ನು ಮಾಡಿ ಮುಗಿಸಬಹುದು. ಆದರೂ, ಬಿರುಕು ಫಿಲ್ಲರ್‌ಗಳು ಅಥವಾ ಇಂಜಕ್ಷನ್ಗಳು ಬಿರುಕುನ ಮೂಲ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ ಎಂಬುದನ್ನು ಗಮನಿಸಬೇಕಿರುವುದು ಮುಖ್ಯವಾಗಿದೆ. ಹೀಗಾಗಿ ಇದಕ್ಕೆ ಹೆಚ್ಚುವರಿ ವಾಟರ್‌ಪ್ರೂಫಿಂಗ್ ಕ್ರಮಗಳು ಬೇಕಾಗಬಹುದು. ಮೇಲಾಗಿ, ಈ ವಿಧಾನವು ದೊಡ್ಡ ಅಥವಾ ಹೆಚ್ಚು ತೀವ್ರವಾದ ಬಿರುಕುಗಳಿಗೆ ಸೂಕ್ತವಲ್ಲ, ಇದಕ್ಕೆ ಹೆಚ್ಚು ವ್ಯಾಪಕವಾದ ರಿಪೇರಿಗಳ ಅಗತ್ಯವಿರುತ್ತದೆ.
ಇದನ್ನೂ ಓದಿ: ನೀವು ತಪ್ಪಿಸಬೇಕಾದ 6 ಸಾಮಾನ್ಯ ವಾಟರ್‌ಪ್ರೂಫಿಂಗ್ ತಪ್ಪುಗಳು
ನಿಮ್ಮ ಮನೆ ಅಥವಾ ಕಟ್ಟಡವನ್ನು ನೀರಿನಿಂದ ಉಂಟಾಗುವ ಹಾನಿ ಮತ್ತು ಇತರ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುವ ಹಲವಾರು ಪ್ರಯೋಜನಗಳನ್ನು ಬೇಸ್ಮೆಂಟ್ ವಾಟರ್‌ಪ್ರೂಫಿಂಗ್ ಒದಗಿಸುತ್ತದೆ. ಬೇಸ್ಮೆಂಟ್ ವಾಟರ್‌ಪ್ರೂಫಿಂಗ್ ಮಾಡುವುದರಿಂದಾಗುವ ಕೆಲವು ಪ್ರಮುಖ ಪ್ರಯೋಜನಗಳು ಹೀಗಿವೆ:
ಬೇಸ್ಮೆಂಟ್ ವಾಟರ್‌ಪ್ರೂಫಿಂಗ್ ನಿಮ್ಮ ಮನೆಯ ತೇವಾಂಶದ ಮಟ್ಟವನ್ನು ಕಡಿಮೆ ಮಾಡಲು ಮತ್ತು ಬೂಷ್ಟು ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ. ಇದು ನಿಮ್ಮ ಮನೆ ಅಥವಾ ಕಟ್ಟಡದಲ್ಲಿ ಒಟ್ಟಾರೆ ಗಾಳಿಯ ಗುಣಮಟ್ಟವನ್ನು ಸುಧಾರಿಸುತ್ತದೆ.
ಕೆಲ ಕಾಲದ ನಂತರ ತೇವಾಂಶವು ಬೇಸ್ಮೆಂಟ್ನ ಮಹಡಿಗಳಿಗೆ ಹಾನಿಯನ್ನುಂಟುಮಾಡುತ್ತದೆ, ಆದರೆ ವಾಟರ್‌ಪ್ರೂಫಿಂಗ್ ಈ ಹಾನಿಯನ್ನು ತಡೆಯಲು ಮತ್ತು ನಿಮ್ಮ ಮನೆಯ ಮಹಡಿಗಳ ಜೀವಿತಾವಧಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ನಿಮ್ಮ ಮನೆ ಅಥವಾ ಕಟ್ಟಡದ ಬೇಸ್ಮೆಂಟ್ನಲ್ಲಿ ನೀರು ಒಳಗೆ ಜಿನುಗುವುದನ್ನು ತಡೆಯಲು ವಾಟರ್‌ಪ್ರೂಫಿಂಗ್ ಸಹಾಯ ಮಾಡುತ್ತದೆ. ಜೊತೆಗೆ ಬೇಸ್ಮೆಂಟ್ನಲ್ಲಿ ನೀರು ತುಂಬುವ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಆಸ್ತಿಗೆ ಉಂಟಾಗುವ ಹಾನಿಯನ್ನು ಕಡಿಮೆ ಮಾಡುತ್ತದೆ.
ನಿಮ್ಮ ಮನೆ ಅಥವಾ ಕಟ್ಟಡದ ಬೇಸ್ಮೆಂಟ್ನಿಂದ ನೀರನ್ನು ತೆಗೆದುಹಾಕಲು ಸಂಪ್ ಪಂಪ್ ಅನ್ನು ವಿನ್ಯಾಸಗೊಳಿಸಲಾಗಿದೆ, ಆದರೆ ಹೆಚ್ಚು ನೀರು ಸಂಗ್ರಹವಾದಲ್ಲಿ ಇದು ಮುಳುಗುವ ಸಾಧ್ಯತೆಗಳಿರುತ್ತವೆ. ಇದನ್ನು ತಡೆಯಲು ಮತ್ತು ನಿಮ್ಮ ಸಂಪ್ ಪಂಪ್ ಅನ್ನು ಹಾನಿಯಿಂದ ರಕ್ಷಿಸಲು ವಾಟರ್‌ಪ್ರೂಫಿಂಗ್ ಸಹಾಯ ಮಾಡುತ್ತದೆ.
ನೀರಿನ ಹಾನಿಯಿಂದ ನಿಮ್ಮ ಮನೆ ಅಥವಾ ಕಟ್ಟಡದ ಸ್ಟ್ರಕ್ಚರ್ನ ದೃಢತೆ ಹಾಳಾಗಬಹುದು. ಆದರೆ ವಾಟರ್‌ಪ್ರೂಫಿಂಗ್ ಮಾಡುವುದು ಈ ಹಾನಿಯನ್ನು ತಡೆಯಲು ಮತ್ತು ನಿಮ್ಮ ಫೌಂಡೇಶನ್ನ ಜೀವಿತಾವಧಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ನಿಮ್ಮ ಮನೆ ಅಥವಾ ಕಟ್ಟಡದಲ್ಲಿ ತೇವಾಂಶದ ಮಟ್ಟವನ್ನು ಕಡಿಮೆ ಮಾಡಲು ಒಳಗಿನಿಂದಲೇ ವಾಟರ್‌ಪ್ರೂಫಿಂಗ್ ಬೇಸ್ಮೆಂಟ್ ಮಾಡಿರುವ ಗೋಡೆಗಳು ಸಹಾಯ ಮಾಡುತ್ತವೆ. ಇದು ಕಡಿಮೆ ವಿದ್ಯುತ್ ವೆಚ್ಚಗಳಿಗೆ ಕಾರಣವಾಗಬಹುದು ಏಕೆಂದರೆ ನಿಮ್ಮ HVAC ವ್ಯವಸ್ಥೆಯು ನಿಮಗೆ ಸರಿಹೊಂದು ತಾಪಮಾನವನ್ನು ನಿರ್ವಹಣೆ ಮಾಡಲು ಹೆಚ್ಚಿನ ಕೆಲಸ ಮಾಡಬೇಕಾದ ಅಗತ್ಯವಿರುವುದಿಲ್ಲ.
ಒಟ್ಟಾರೆಯಾಗಿ, ಈ ಬ್ಲಾಗ್ ಬೇಸ್ಮೆಂಟ್ ವಾಟರ್‌ಪ್ರೂಫಿಂಗ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ಒಳಗೊಂಡಿದೆ. ಬೇಸ್ಮೆಂಟ್ ವಾಟರ್‌ಪ್ರೂಫಿಂಗ್ ನಿಮ್ಮ ಮನೆ ಅಥವಾ ಕಟ್ಟಡವನ್ನು ನೀರಿನ ಹಾನಿ, ಬೂಷ್ಟು ಮತ್ತು ಸ್ಟ್ರಕ್ಚರಲ್ ಸಮಸ್ಯೆಗಳಿಂದ ರಕ್ಷಿಸುವಲ್ಲಿ ನಿರ್ಣಾಯಕ ಹಂತವಾಗಿದೆ. ತೇವಾಂಶದ ಕಾರಣಗಳನ್ನು ಗುರುತಿಸಿ, ಸರಿಯಾದ ವಿಧಾನವನ್ನು ಆಯ್ಕೆಮಾಡಿಕೊಂಡು ಒಂದು ಬಾರಿ ಬೇಸ್ಮೆಂಟ್ ವಾಟರ್ಪ್ರೂಫಿಂಗ್ಗೆ ಖರ್ಚು ಮಾಡುವ ಮೂಲಕ, ನೀವು ಶುಷ್ಕ ಮತ್ತು ಸುರಕ್ಷಿತ ಬೇಸ್ಮೆಂಟ್ನ ಭರವಸೆಯನ್ನು ಹೊಂದಬಹುದು. ಹೆಚ್ಚುವರಿಯಾಗಿ, ಬೇಸ್ಮೆಂಟ್ ವಾಟರ್ಪ್ರೂಫಿಂಗ್ನಿಂದಾಗುವ ಪ್ರಯೋಜನಗಳು ಯಾವುದೇ ಮನೆಮಾಲೀಕರಿಗೆ ಅಥವಾ ಆಸ್ತಿ ಮಾಲೀಕರಿಗೆ ಉತ್ತಮ ಹೂಡಿಕೆಯನ್ನು ಮಾಡಿದಂತಾಗುತ್ತದೆ. ಆದ್ದರಿಂದ ನಿಮ್ಮ ಮನೆಗೆ ವಾಟರ್ಪ್ರೂಫ್ ಅನ್ನು ಹೇಗೆ ಮಾಡಬೇಕೆಂಬುದನ್ನು ತಿಳಿದುಕೊಳ್ಳಿರಿ!