Waterproofing methods, Modern kitchen designs, Vaastu tips for home, Home Construction cost

Get In Touch

Get Answer To Your Queries

Select a valid category

Enter a valid sub category

acceptence


ಮನೆ ಕಟ್ಟುವಾಗ ಗಮನಿಸಬೇಕಾದ ಸರಳ ವಾಸ್ತು ಸಲಹೆಗಳು

ಮನೆಯ ವಾಸ್ತು ಸಲಹೆಗಳು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಅದೃಷ್ಟ, ಸಂತೋಷ ಮತ್ತು ಯಶಸ್ಸ ತರಲು ಸಹಾಯ ಮಾಡುತ್ತವೆ.

Share:


ಮನೆಗೆ ಸಂತೋಷ ಮತ್ತು ಯಶಸ್ಸನ್ನು ತರಲು ಈ ಸರಳ ವಾಸ್ತು ಸಲಹೆಗಳನ್ನು ಅನುಸರಿಸಿ.

 

ನೀವು ಹೊಸ ಮನೆಗೆ ಹೋಗುತ್ತಿದ್ದರೆ ಮತ್ತು ಇಂಟೀರಿಯರ್ ಡಿಸೈನರ್ ಸಹಾಯದಿಂದ ಅದನ್ನು ನೀವೇ ವಿನ್ಯಾಸಗೊಳಿಸಲು ಯೋಜಿಸುತ್ತಿದ್ದರೆ ನಿಮ್ಮ ಮನೆಯ ವಾಸ್ತುವನ್ನು ಪರೀಕ್ಷಿಸಲೇ ಬೇಕೆಂದು ಸಲಹೆ ನೀಡಲಾಗುತ್ತದೆ. ಮನೆಗಾಗಿ ವಾಸ್ತು ಶಾಸ್ತ್ರವು ವೈಜ್ಞಾನಿಕ ಸಂಶೋಧನೆಯನ್ನು ಆಧರಿಸಿದೆ ಮತ್ತು ಇದು ವಿನ್ಯಾಸ, ವಾಸ್ತುಶಿಲ್ಪ ಮತ್ತು ವಿನ್ಯಾಸದ ತತ್ವವನ್ನು ವಿವರಿಸುತ್ತದೆ. ಮನೆಯು ಸಕಾರಾತ್ಮಕ ಶಕ್ತಿಯನ್ನು ಹೊರಸೂಸಲು ಮತ್ತು ನಕಾರಾತ್ಮಕತೆಯು ಹತ್ತಿರ ಬರದಂತೆ ತಡೆಯಲು, ಮನೆಗಾಗಿ ವಾಸ್ತು ಸಲಹೆಗಳನ್ನು ಅನುಸರಿಸುವುದು ಅತ್ಯಗತ್ಯ.



ವಾಸ್ತುವಿನ ವಿಜ್ಞಾನ ಮತ್ತು ನಮ್ಮ ಮನೆಗಳ ವಿನ್ಯಾಸದ ನಡುವಿನ ಸಂಬಂಧವನ್ನು ಸಕಾರಾತ್ಮಕತೆ ಮತ್ತು ಒಳ್ಳೆಯ ವೈಬ್‌ಗಳನ್ನು ಸುಧಾರಿಸಲು ಅರ್ಥಮಾಡಿಕೊಳ್ಳುವುದು ಅಗತ್ಯವಾಗಿದೆ. ನೀವು ಪ್ರೀತಿಯಿಂದ ಕೂಡಿದ ಸಂತೋಷದ ಜೀವನವನ್ನು ಅನುಭವಿಸಲು ನಿಮ್ಮ ಮನೆಯಲ್ಲಿ ಅಳವಡಿಸಿಕೊಳ್ಳಬೇಕಾದ ಮನೆಗಾಗಿ ವಿವಿಧ ವಾಸ್ತು ಸಲಹೆಗಳಿವೆ. ಅವುಗಳಲ್ಲಿ ಇಲ್ಲಿ ಕೆಲವು ಅಂಶಗಳಿವೆ:


ಸೈಟ್ ಆಯ್ಕೆ ಮಾಡಿಕೊಳ್ಳುವುದು:

 

  • ಮನೆಯ ಸಕಾರಾತ್ಮಕತೆಯಲ್ಲಿ ವಾಸ್ತು ಪ್ರಕಾರ ಮನೆಯ ದಿಕ್ಕು ಬಹಳ ದೊಡ್ಡ ಪಾತ್ರವನ್ನು ವಹಿಸುತ್ತದೆ. ಹೀಗಾಗಿ ವಸತಿ ಸ್ಥಳಕ್ಕಾಗಿ ಭೂಮಿಯನ್ನು ನೀವು ಖರೀದಿಸುತ್ತಿದ್ದಾಗ ಅಥವಾ ಆಯ್ಕೆ ಮಾಡಿಕೊಳ್ಳುತ್ತಿದ್ದಾಗ, ಪ್ಲಾಟ್‌ನ ವಾಸ್ತುವನ್ನು ನೋಡುವುದು ಮತ್ತು ವಾಸ್ತು ಪ್ರಕಾರ ಮುಂದಿನ ತೀರ್ಮಾನ ಮಾಡುವುದು ಉತ್ತಮ. ಸೈಟ್ ಓರಿಯಂಟೇಶನ್, ಮಣ್ಣಿನ ಪ್ರಕಾರ, ಪ್ಲಾಟ್​ ಆಕಾರ ಮತ್ತು ಹೆಚ್ಚಿನ ವಿಷಯಗಳ ಕುರಿತು, ಇವು ಸಣ್ಣ ವಿಚಾರಗಳೆನ್ನದೇ ಕಾಳಜಿಯಿಂದ ಪ್ರಾಮುಖ್ಯತೆ ಕೊಡಬೇಕು.



ಬೀದಿ ಶೂಲಗಳು :

 

ಪ್ಲಾಟ್​ಗೆ ರಸ್ತೆ ಹತ್ತಿಕೊಂಡಿರುವುದನ್ನು ಬೀದಿ ಶೂಲ ಎಂದು ಕರೆಯಲಾಗುತ್ತದೆ. ಕೆಲವು ಬೀದಿ ಶೂಲಗಳು ಸಕಾರಾತ್ಮಕತೆಯನ್ನು ತರುತ್ತವೆ ಮತ್ತು ಇತರ ಬೀದಿ ಶೂಲಗಳು ನಕಾರಾತ್ಮಕ ಶಕ್ತಿಯನ್ನು ಮನೆಗೆ ತರುತ್ತವೆ. ಈಶಾನ್ಯದ ಉತ್ತರದಲ್ಲಿ, ಈಶಾನ್ಯದ ಪೂರ್ವದಲ್ಲಿ ಬೀದಿ ಶೂಲಗಳನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಆದರೆ ಆಗ್ನೇಯದಿಂದ ದಕ್ಷಿಣಕ್ಕೆ, ವಾಯವ್ಯದ ಪಶ್ಚಿಮಕ್ಕೆ ಇರುವುದನ್ನು ಇದ್ದುದರಲ್ಲಿಯೇ ಕಡಿಮೆ ಅಂದರೆ ಮಧ್ಯಮ ಎಂದು ಪರಿಗಣಿಸಲಾಗುತ್ತದೆ.



ನೀರಿನ ಮೂಲಗಳು :

 

  • ಮನೆ ವಾಸ್ತುವನ್ನು ಪರಿಗಣಿಸುವಾಗ, ನೀರಿನ ಮೂಲಗಳನ್ನು ನೋಡಿಕೊಳ್ಳಬೇಕಾದುದು ಮತ್ತೊಂದು ಅಂಶವಾಗಿದೆ. ಈಶಾನ್ಯವು ಟ್ಯಾಂಕ್‌ಗಳು, ಬಾವಿಗಳು ಅಥವಾ ಇತರ ಯಾವುದೇ ನೀರಿನ ಮೂಲಗಳಿಗೆ ಒಳ್ಳೆಯ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಮನೆಗಳಲ್ಲಿ ಉತ್ತರ ದಿಕ್ಕನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಆದ್ದರಿಂದ ಅದನ್ನು ಖಾಲಿ ಬಿಡಬೇಕು. ಖಾಲಿ ಜಾಗವು ನೀರಿನ ತೊಟ್ಟಿಗಳಿಗೆ ಅವಕಾಶ ಕಲ್ಪಿಸುತ್ತದೆ ಅದು ಸಕಾರಾತ್ಮಕ ಪರಿಣಾಮವನ್ನು ನೀಡುತ್ತದೆ.


ಮನೆಯ ಪ್ರವೇಶ ದ್ವಾರಕ್ಕೆ ವಾಸ್ತು:

 

  • ಮುಖ್ಯ ದ್ವಾರದ ವಾಸ್ತು ನಿಮ್ಮ ಮನೆಯ ಪ್ರವೇಶದ್ವಾರದ ಪ್ರಮುಖ ಅಂಶವಾಗಿದೆ. ಮುಖ್ಯ ಬಾಗಿಲು ಯಾವಾಗಲೂ ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿರಬೇಕು. ಮುಖ್ಯ ಬಾಗಿಲನ್ನು ಉತ್ತಮ ಗುಣಮಟ್ಟದ ಮರದ ಕಟ್ಟಿಗೆಯಿಂದ ನಿರ್ಮಿಸಬೇಕು. ಜೊತೆಗೆ ಅದು ಅತ್ಯಂತ ಆಕರ್ಷಕವಾಗಿ ಕಾಣಬೇಕು. ಮುಖ್ಯ ದ್ವಾರದ ಹೊರಗೆ ಯಾವುದೇ ಕಾರಂಜಿಗಳನ್ನು ಅಥವಾ ಯಾವುದೇ ಇತರ ಜಲ ಕೇಂದ್ರಿತ ಅಲಂಕಾರಿಕಗಳನ್ನು ಮಾಡಬೇಡಿರಿ.


ಲಿವಿಂಗ್ ರೂಮ್:

 

  • ಮನೆಯಲ್ಲಿನ ಹೆಚ್ಚಿನ ಚಟುವಟಿಕೆಗಳು ನಡೆಯುವ ಸ್ಥಳವು ಲಿವಿಂಗ್ ರೂಮ್ ಆಗಿರುತ್ತದೆ. ಇದು ನಿಮ್ಮ ಮನೆಯ ಕುರಿತು ಮೊದಲ ಅಭಿಪ್ರಾಯವನ್ನು ಸೃಷ್ಟಿಸುತ್ತದೆ, ಆದ್ದರಿಂದ ಇದು ಅಸ್ತವ್ಯಸ್ತ ರಹಿತವಾಗಿದೆ ಎಂಬುದನ್ನು ಮನಗಾಣಿರಿ. ಇದು ಪೂರ್ವ, ಉತ್ತರ ಅಥವಾ ಈಶಾನ್ಯಕ್ಕೆ ಮುಖ ಮಾಡಿರಬೇಕು. ಲಿವಿಂಗ್ ರೂಮ್​​ನ ಪಶ್ಚಿಮ ಅಥವಾ ನೈಋತ್ಯ ದಿಕ್ಕಿನಲ್ಲಿ ಭಾರವಾದ ಪೀಠೋಪಕರಣಗಳನ್ನು ಇಡಬೇಕು.

     

ಇದನ್ನೂ ಓದಿ : ಲಿವಿಂಗ್​ ರೂಮ್​ಗಾಗಿ ವಾಸ್ತು ಸಲಹೆಗಳು


ಮಾಸ್ಟರ್​ ಬೆಡ್​ರೂಮ್​ :

 

ಪರಿಪೂರ್ಣವಾಗಿ ಹೇಳುವುದಾದರೆ, ನೈಋತ್ಯ ದಿಕ್ಕಿನಲ್ಲಿ ಬೆಡ್​ರೂಮ್​ ಉತ್ತಮ ಆರೋಗ್ಯ ಮತ್ತು ಸಮೃದ್ಧಿ ಕೊಡುವುದನ್ನು ಖಚಿತಪಡಿಸುತ್ತದೆ. ಬೆಡ್​ರೂಮ್​ ನೈಋತ್ಯ ಮೂಲೆಯಲ್ಲಿ ಹಾಸಿಗೆಯನ್ನು ಇಡಬೇಕು. ಹಾಸಿಗೆಯ ಮುಂದೆ ಕನ್ನಡಿ ಅಥವಾ ಟಿವಿಯನ್ನು ಇಡಲೇಬಾರದು.

 

ಇದನ್ನೂ ಓದಿ : ನಿಮ್ಮ ಬೆಡ್​ರೂಮ್​ಗಾಗಿ ಅತ್ಯಗತ್ಯವಾದ 5 ಪ್ರಮುಖ ವಾಸ್ತು ಸಲಹೆಗಳು


ಮಕ್ಕಳ ರೂಮ್​/ ಗೆಸ್ಟ್​ ರೂಮ್​:

 

  • ಮಕ್ಕಳಿಗಾಗಿ ರೂಮ್​ ಈಶಾನ್ಯ ದಿಕ್ಕಿನಲ್ಲಿರಬೇಕು. ಏಕೆಂದರೆ ಅದು ಬುದ್ಧಿವಂತಿಕೆ, ಶಕ್ತಿ ಮತ್ತು ಸಾಮರ್ಥ್ಯದ ಗುಣಮಟ್ಟವನ್ನು ಒದಗಿಸುತ್ತದೆ. ಹಾಸಿಗೆಯನ್ನು ಒಂದೇ ದಿಕ್ಕಿನಲ್ಲಿ ಇಡುವುದರಿಂದ ಮಗುವಿಗೆ ಸಕಾರಾತ್ಮಕತೆ ದೊರೆಯುತ್ತದೆ.

ಅಡುಗೆಮನೆ :

 

  • ಅಡುಗೆಮನೆ ಮಾಡಲಿಕ್ಕೆ ಆಗ್ನೇಯ ದಿಕ್ಕು ಸೂಕ್ತವೆಂದು ಪರಿಗಣಿಸಲಾಗುತ್ತದೆ. ಅಡುಗೆಮನೆಯ ಗೋಡೆಗಳಿಗೆ ಹಳದಿ, ಗುಲಾಬಿ, ಕಿತ್ತಳೆ, ಕೆಂಪು ಮತ್ತು ಕಪ್ಪು ಮುಂತಾದ ಗಾಢವಾದ ಬಣ್ಣಗಳನ್ನು ಆರಿಸಿ. ಸ್ಟೌವ್​ ಅನ್ನು ಆಗ್ನೇಯ ದಿಕ್ಕಿನಲ್ಲಿ ಇಡಬೇಕು.

     

ಇದನ್ನೂ ಓದಿ : ವಾಸ್ತು ಪ್ರಕಾರ ಅಡುಗೆಮನೆ ವಿನ್ಯಾಸ ಮಾಡಲು ಸರಳ ಸಲಹೆಗಳು


ಡೈನಿಂಗ್ ಹಾಲ್ :

 

  • ಸರಿಯಾಗಿ ಹೇಳಬೇಕೆಂದರೆ, ಪೂರ್ವ, ಪಶ್ಚಿಮ ಅಥವಾ ಉತ್ತರ ದಿಕ್ಕುಗಳಿಗೆ ಮುಖ ಮಾಡಿ ಊಟ ಮಾಡಬೇಕು. ನಿತ್ಯವೂ ದಕ್ಷಿಣ ದಿಕ್ಕಿನತ್ತ ಮುಖ ಮಾಡಿಕೊಂಡು ಊಟ ಮಾಡುವುದರಿಂದ ಆರೋಗ್ಯ ಸಮಸ್ಯೆಗಳು ಎದುರಾಗಬಹುದಾದ ಸಾಧ್ಯತೆಗಳು ಹೆಚ್ಚಿರುತ್ತದೆ. ಡೈನಿಂಗ್ ಟೇಬಲ್ ಚೌಕಾಕಾರ ಅಥವಾ ಆಯತಾಕಾರವಾಗಿರಬೇಕು ಮತ್ತು ದುಂಡಗೆ ಅಥವಾ ಇನ್ಯಾವುದೇ ಅನಿಯಮಿತ ಆಕಾರದಲ್ಲಿ ಇರಲೇಬಾರದು.


ಪೂಜಾ ಕೋಣೆ :

 

  • ಪೂರ್ವ ಅಥವಾ ಈಶಾನ್ಯ ದಿಕ್ಕು ಪೂಜಾ/ಪ್ರಾರ್ಥನಾ ಕೋಣೆಗೆ ಸೂಕ್ತವಾಗಿದೆ. ಪವಿತ್ರ ಪೂಜಾವೇದಿಕೆಯನ್ನು ಮಾಡಿರಿ ಮತ್ತು ಅದನ್ನು ಮೇಣದಬತ್ತಿಗಳು ಅಥವಾ ಊದಬತ್ತಿಗಳಿಂದ ಅಲಂಕರಿಸಿ. ಪೂಜಾ ಕೋಣೆಯ ಗೋಡೆಗಳಿಗೆ ಬಿಳಿ, ತಿಳಿ ಬೂದು ಹಳದಿ, ತಿಳಿ ಹಳದಿ ಅಥವಾ ಹಸಿರು ಬಣ್ಣಗಳು ಆಯ್ಕೆ ಮಾಡಿರಿ.

     

ಇದನ್ನೂ ಓದಿ : ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು 6 ಮಾರ್ಗಗಳು


ಬಾತ್​ರೂಮ್​ / ಶೌಚಾಲಯಗಳು:

 

  • ವಾಸ್ತು ಪ್ರಕಾರ ವಾಶ್​ಬೇಸಿನ್​ ಮತ್ತು ಶವರ್​ಗಳನ್ನು ಬಾತ್​ರೂಮ್​ನ ಪೂರ್ವ, ಉತ್ತರ ಮತ್ತು ಈಶಾನ್ಯ ಭಾಗದಲ್ಲಿ ಇರಬೇಕು. ಬಾತ್​ರೂಮ್​ ಮತ್ತು ಶೌಚಾಲಯದಲ್ಲಿ ನೀರು ಹರಿದು ಹೋಗಲು ಮತ್ತು ಒಳಚರಂಡಿಯ ವ್ಯವಸ್ಥೆಯು ಇರಬೇಕಾದ ವಾಸ್ತು ದಿಕ್ಕು ಉತ್ತರ, ಪೂರ್ವ ಅಥವಾ ಈಶಾನ್ಯವಾಗಿದೆ.


ಬಾಲ್ಕನಿಗಳು :

 

  • ಬಾಲ್ಕನಿಗಳನ್ನು ಮನೆಯ ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ನಿರ್ಮಿಸಬೇಕು. ಮನೆಯ ನೈಋತ್ಯ ಅಥವಾ ದಕ್ಷಿಣ ದಿಕ್ಕಿನಲ್ಲಿ ಬಾಲ್ಕನಿಯನ್ನು ಯಾರೂ ಹೊಂದಿರಬಾರದು.




ನಿಮ್ಮ ಮನೆಯಲ್ಲಿ ಸಂತೋಷ, ಯಶಸ್ಸು ಮತ್ತು ಉತ್ತಮ ಆರೋಗ್ಯದಿಂದ ತುಂಬಿರುವುದನ್ನು ಖಚಿತಪಡಿಸಿಕೊಳ್ಳಲು ಮನೆಗಾಗಿ ಈ ವಾಸ್ತು ಸಲಹೆಗಳನ್ನು ಅಳವಡಿಸಿಕೊಳ್ಳಬೇಕು.



ಸಂಬಂಧಿತ ಲೇಖನಗಳು




ಶಿಫಾರಸು ಮಾಡಿದ ವೀಡಿಯೊಗಳು





  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....