Waterproofing methods, Modern kitchen designs, Vaastu tips for home, Home Construction cost

Get In Touch

Get Answer To Your Queries

Select a valid category

Enter a valid sub category

acceptence


ಭೂಕಂಪ ಪ್ರತಿರೋಧಕ ನಿರ್ಮಾಣ ತಂತ್ರ : ಸುರಕ್ಷಿತ ಮತ್ತು ಸ್ಥಿರತೆಗಾಗಿ ಕಟ್ಟಡ

ಈ ಬ್ಲಾಗ್‌ನಲ್ಲಿ ಕೆಲವು ಭೂಕಂಪ ನಿರೋಧಕ ನಿರ್ಮಾಣ ತಂತ್ರಗಳಿಂದ ನಿಮ್ಮ ಮನೆಯನ್ನು ಹೇಗೆ ರಕ್ಷಿಸಬಹುದು ಮತ್ತು ಸಾವು, ನೋವುಗಳನ್ನು ಹೇಗೆ ತಡೆಯಬಹುದು ಎಂಬ ರೂಪುರೇಷೆಗಳ ಬಗ್ಗೆ ತಿಳಿಯೋಣ.

Share:





ಭೂಕಂಪ ಮತ್ತು ಇನ್ನಿತರ ನೈಸರ್ಗಿಕ ದುರಂತದಿಂದ ವಿನಾಶ, ಅವ್ಯವಸ್ಥೆ ಉಂಟಾಗುತ್ತದೆ. ಕಟ್ಟಡ ಮತ್ತು ಮನೆಗಳ ಕುಸಿತ ಸಾಕಷ್ಟು ಸಾವುನೋವುಗಳು ಉಂಟಾಗುತ್ತವೆ. ನಿಮ್ಮ ಮನೆ ಮತ್ತು ಕಟ್ಟಡಗಳನ್ನು ಭೂಕಂಪ‌ ನಿರೋಧಕವನ್ನಾಗಿ ಮಾಡುವುದು ತುಂಬಾ ಮುಖ್ಯವಗುತ್ತದೆ, ಅದು ಹೇಗೆ ಎಂದು ನಿಮಗೆ ತಿಳಿದಿರಬೇಕು.


ಭೂಕಂಪ ನಿರೋಧಕ ನಿರ್ಮಾಣಕ್ಕೆ ಸುರಕ್ಷಿತ ವಿಧಾನಗಳು



ಕಟ್ಟಡದ ಕಟ್ಟುವ ವಸ್ತುಗಳ ಸ್ಥಿತಿಸ್ಥಾಪಕತೆ ಮತ್ತು ಸಾಮರ್ಥ್ಯ ಭೂಕಂಪವನ್ನು ಹೇಗೆ ತಡೆದುಕೊಳ್ಳುತ್ತವೆ ಎಂಬುದು ಮಾತ್ರವಲ್ಲದೆ, ಅವುಗಳು ಕಟ್ಟಡದ ರಚನೆಯೊಂದಿಗೆ ಹೇಗೆ ಹೊಂದಿಕೊಳ್ಳುತ್ತವೆ ಎಂಬುದು ಮುಖ್ಯವಾಗುತ್ತದೆ. ಉದ್ದವಾದ, ನೇರವಾದ ಕಲ್ಲಿನ ಗೋಡೆಯು ಘರ್ಷಣೆ ಮತ್ತು ಅದರ ನಿರ್ಮಾಣದ ಕೋನಗಳ ಮೇಲೊಂದೆ ಅವಲಂಬಿಸಿದ್ದರೆ, ಭೂಕಂಪದ ಸಮಯದಲ್ಲಿ ಇದು ಖಂಡಿತ ಬಿದ್ದುಹೊಗುತ್ತದೆ. ಗೋಡೆಯ ಭಾರ ಮತ್ತು ಜಡತ್ವದ ಕಾರಣದಿಂದ ಭೂಕಂಪವಾದಾಗ ಅದರ ಚಲನೆಯೊಂದಿಗೆ ಕಟ್ಟಡದ ಚಲನೆಯಾಗುವುದಿಲ್ಲ. ಇದು ಗೋಡೆಯ ಭಾರವು ಸ್ಥಿರ ಭಾರ ರೇಖೆಯಿಂದ ಸರಿದು ಹೋಗಿ ಓರೆಯಾಗಿ, ಕಲ್ಲುಗಳು ತಾವು ಇರುವ ಜಾಗದಿಂದ ಸ್ಥಾನಪಲ್ಲಟ ಕಾರಣವಾಗುವುದಲ್ಲದೆ, ಗೋಡೆಯ ಭಾರವು ಸ್ಥಿರ ಭಾರ ರೇಖೆಯಿಂದ ಸರಿದುಹೊಗುವಂತೆ ಮಾಡುತ್ತದೆ.

 

ಭೂಕಂಪ ನಿರೋಧಕ ನಿರ್ಮಾಣ ತಂತ್ರವನ್ನು ನಿಮ್ಮ ಮನೆ ಕಟ್ಟುವಾಗ ಹೇಗೆ ಉಪಯೋಗಿಸಬೇಕು ಎಂದು ಈ ಕೆಳಗಿನಂತಿದೆ.

 

  • - ಬ್ಯಾಂಡ್‌ಗಳು :

  • ಗಾರೆಯ ಕಲ್ಲಿನ ರಚನೆಯನ್ನು ಹೆಚ್ಚಿನ ಎಳೆಯುವ ಸಾಮರ್ಥ್ಯದ ಬ್ಯಾಂಡ್‌ಗಳ ಮೂಲಕ ಬಲಗೊಳಿಸುವುದಕ್ಕೆ ಸಮತಲವಾದ ಬ್ಯಾಂಡ್ ಎನ್ನಬಹುದು. ಇದು ಕಟ್ಟಡ ರಚನೆಯ ಎರಡು ಭಾಗಗಳು ಸೇರಿ ಒಂದೇ ಘಟಕವಾಗುವ ಜಾಗದಲ್ಲಿ ಮಾಡಬಹುದಾಗಿದೆ.
 
  • ಸಮತಲ ಬ್ಯಾಂಡ್‌ಗಳು ಇಲ್ಲಿ ಉಪಯೋಗವಾಗುತ್ತವೆ:
 
    • ಕಟ್ಟಡಗಳ ಅಡಿಪಾಯದ ಮಟ್ಟದ ಮೇಲೆ

    • ಬಾಗಿಲು ಮತ್ತು ಕಿಟಕಿಗಳ ಲಿಂಟಲ್ ಗಳ ಮಟ್ಟದ ಮೇಲೆ

    • ಛಾವಣಿಯ ಮಟ್ಟದ ವರೆಗೆ

       

    ಸಮತಲ ಬ್ಯಾಂಡ್ ನ ಮಾದರಿಗಳು:

     

    • ಛಾವಣಿ ಬ್ಯಾಂಡ್

    • ಲಿಂಟಲ್ ಬ್ಯಾಂಡ್

    • ಗ್ಯಾಬಲ್ ಬ್ಯಾಂಡ್

    • ನೆಲಘಟ್ಟು ಬ್ಯಾಂಡ್

       

  • - ವೇಸ್ಟ್‌ ಟೈಯರ್ ಪ್ಯಾಡ್ಸ್‌ :

  • ಈ ವಿಧಾನವು ಪ್ರಾಯೋಗಿಕ ಅಧ್ಯಯನಗಳಿಂದ ಕಡಿಮೆ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಿದ್ದಾಗಿದೆ. ಆಟೊಮೊಬೈಲ್ ವ್ಯರ್ಥ ಟೈಯರ್ ಗಳ ತುಂಡುಗಳಿಂದ ಸೆಸ್ಮಿಕ್ ಬೇಸ್ ಐಸೊಲೇಶನ್ ಪ್ಯಾಡ್ ಗಳನ್ನು ಮಾಡಲಾಗುತ್ತದೆ. ಸೆಸ್ಮಿಕ ಬೇಸ್ ಯಸೊಲೇಶನ್ ಎನ್ನುವುದು ನಿರ್ದಿಷ್ಟವಾಗಿ ತಯಾರಿಸಿದ ಭೂಕಂಪ ನಿರೋಧಕ ವ್ಯವಸ್ಥೆಯಾಗಿದೆ. ಇದನ್ನು ಹಲವಾರು ಅಧ್ಯಯನಗಳಿಗೆ ಒಳಪಡಿಸಲಾಗಿದೆ. ಮೊದಲು ಮಾಡಲಾದ ಹೆಚ್ಚಿನ ಅಧ್ಯಯನಗಳು ಬೇಸ್ ಐಸೊಲೇಶನ್ ವ್ಯವಸ್ಥೆಯನ್ನು ಸುಧಾರಿಸುವ ಬಗ್ಗೆ ಕೇಂದ್ರೀಕೃತವಾಗಿದ್ದವು. ಮತ್ತೊಂದು ಕಡೆ ಈ ಅಧ್ಯಯವು ಉಪಯೋಗವಿಲ್ಲದ ವ್ಯರ್ಥ ಟೈಯರ್ ಗಳಂತಹ ಮತ್ತೊಂದಿಷ್ಟು ವಸ್ತುಗಳನ್ನು ಉಪಯೊಗಿಸಿ ಸೆಸ್ಮಿಕ ಬೇಸ್ ಯಸೊಲೇಶನ್ ಪ್ಯಾಡ್‌ಗಳ ವೆಚ್ಚ ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಕಳೆದ 30 ವರ್ಷಗಳಿಂದ ಎಲಾಸ್ಟೊಮರ್ ನ ಐಸೊಲೇಶನ್ ಗಳ ಬಗ್ಗೆ ಸಂಶೋಧನೆ ಮಾಡಲಾಗಿದೆ ಮತ್ತು ಬಳಸಲಾಗಿದೆ. ಸೆಸ್ಮಿಕ್ ಬೇಸ್ ಐಸೊಲೇಶನ್ ಗಳಿಗೆ, ಉಕ್ಕು ಅಥವಾ ಪೈಬರ್ ನ ಬಲವರ್ಧಕಗಳಾಗಿ ಎಲಾಸ್ಟೊಮಿಟರ್ ನ ಒಳಗೆ ಬಳಸಿದಾಗ ಐಸೊಲೇಟರ್ ಗಳು ಲಂಬವಾಗಿ ಹೆಚ್ಚಿನ ಗಟ್ಡಿತನವನ್ನು ನೀಡುತ್ತವೆ. ಆದರೆ, ಬಲವರ್ಧನೆಗಾಗಿ ಮಾಡಿದ ರಬ್ಬರ್ ನ ಪದರಗಳು ಕಡಿಮೆ ಸಮತಟ್ಟಾದ ಗಟ್ಟಿತನವನ್ನು ನೀಡುತ್ತವೆ.
 
  • - ಹಾಂಚ್‌ಗಳು :

  • ಭೂಕಂಪದ ಸಮಯಲ್ಲಿ ಕೂಡಿಕೆಗಳು ಅಥವಾ ಸಂದುಗಳು ಅತ್ಯಂತ ದುರ್ಬಲ ಎಂದು ತಿಳಿಯಲಾಗಿದೆ ಮತ್ತು ಹೆಚ್ಚಿನ ಕಟ್ಟಡಗಳು ಕೂಡಿಕೆಗಳ ವೈಫಲ್ಯದಿಂದ ಸೋಲುತ್ತವೆ. ಕೂಡಿಕೆಗಳ ಬಲವನ್ನು ಹೆಚ್ಚಿಸುವುದರಿಂದ ಭೂಕಂಪ ನಿರೊಧಕವನ್ನು ಸಾಧಿಸಬಹುದು. ಕೂಡಿಕೆಗಳ ಬಲವನ್ನು ಹೆಚ್ಚಿನ ಸಾಮರ್ಥ್ಯದ ಅಥವಾ ಫೈಬರ್‌ ರಿಇನ್‌ಪೋರ್ಸಡ್ ಕಾಂಕ್ರೀಟ್ ಗಳನ್ನು ಬಳಸುವುದರಿಂದ ಹೆಚ್ಚಿಸಬಹುದಾಗಿದೆ. ಅಥವಾ ಕೂಡಿಕೆಗಳ ಬಳಿ ಸೆಕ್ಷನ್ ಗಳನ್ನು ಹೆಚ್ಚಿಸುವುದರ ಮೂಲಕ ಮತ್ತು ಹಾಂಚ್‌ಗಳನ್ನು ನೀಡುವುದರ ಮೂಲಕ ಸಾಮರ್ಥ್ಯ ವನ್ನು ಹೆಚ್ಚಿಸಬಹುದು. ಇದನ್ನು ಬ್ಯಾಂಬು ನಾಟ್ ಗಳಂತೆ ಮಾಡಬಹುದು. ಇದರ ಪರಿಣಾಮವಾಗಿ ಸಂದುಗಳು ಗಟ್ಟಿಯಾಗುತ್ತವೆ.
  • - ಟೊಳ್ಳಾದ ಅಡಿಪಾಯಗಳು :

  • ನಮಗೆ ತಿಳಿದಂತೆ ಎರಡನೇಯ ಮತ್ತು ಲವ್ ವೇವ್‌ಗಳು ಹೆಚ್ಚು ವಿನಾಶಮಾಡುವ ಭೂಕಂಪದ ಅಲೆಗಳಾಗಿವೆ. ಎರಡನೆಯ ಅಲೆಯು ನೀರಿನ ಮೂಲಕ ಪ್ರಯಾಣಿಸುವುದಿಲ್ಲ. ಅದ್ದರಿಂದ ಟೊಳ್ಳಾದ ರಾಪ್ಟ ಅಡಿಪಾಯವನ್ನು ಮಾಡಿ ನೀರಿನಿಂದ ತುಂಬಿಸುವುದರಿಂದ ಭೂಕಂಪದಿಂದ ಆಗುವ ಕೆಲವು ವಿನಾಶಗಳನನ್ನು ತಪ್ಪಿಸಬಹುದು. ಇದನ್ನು ಜಿಗುಟಾದ ದ್ರವದಿಂದ ತುಂಬುವುದರಿಂದ ಭೂಕಂಪದಿಂದ ಆಗುವ ಪರಿಣಾಮವನ್ನು ಕಂಪನ ನಿರೋಧಕವಾಗಿ ಬಳಸಬಹುದು.
  • - ಸ್ಲೈಡಿಂಗ್‌ ಜಾಯಿಂಟ್‌ :

  • ಜಾಯಿಂಟ್‌ ಅನ್ನು ಜಾರಿಸಲು ಬೇಕಾದ ಶಕ್ತಿಗಿಂತ ಸೂಪರ್‌ಸ್ಟ್ರಕ್ಚರ್‌ಗೆ ವರ್ಗಾವಣೆಯಾಗುವ ಶಕ್ತಿಯು ಕಡಿಮೆ ಇರುತ್ತದೆ ಮತ್ತು ಜಾರುವಾಗಿನ ಘರ್ಷಣೆ ಶಕ್ತಿಯು ಚದುರಿ ಹೋಗುವಾಗ ಸೂಪರ್‌ಸ್ಟ್ರಕ್ಚರ್‌ಗೆ ವರ್ಗಾವಣೆ ಆಗುವುದಿಲ್ಲ ಎಂಬ ಊಹೆಯ ಮೇಲೆ ಸ್ಲೈಡಿಂಗ್‌ ಜಾಯಿಂಟ್‌ ಪರಿಕಲ್ಪನೆಯು ಅವಲಂಬಿತವಾಗಿದೆ.

ಕಡಿಮೆ ವೆಚ್ಚದಲ್ಲಿ ಸೆಸ್ಮಿಕ್ ಬಲವರ್ಧಕ ವಸ್ತುಗಳು



ನಿರ್ದಿಷ್ಟ ನಿರ್ಮಾಣ ಸಾಮಗ್ರಿಗಳನ್ನು ಲೆಕ್ಕಿಸದೆ, ಹೆಚ್ಚುವರಿ ಖರ್ಚು ಮಾಡದೆಯೇ ಇಲ್ಲಿಯವರೆಗೆ ಉಲ್ಲೇಖಿಸಲಾದ ವಿಧಾನಗಳ ಮೂಲಕ ಭೂಕಂಪ ಸುರಕ್ಷಿತ ನಿರ್ಮಾಣ ವಿಧಾನಗಳನ್ನು ಮಾಡಲು ಸಾಧ್ಯವಿದೆ.‌ ಮರದ ಚೌಕಟ್ಟು, ಕಚ್ಚಾ ಇಟ್ಟಿಗೆ, ಭೂಕಂಪ ಸಕ್ರಿಯ ಪ್ರದೇಶಗಳಲ್ಲಿ ಜಾರಿಯಲ್ಲಿರುವ ನಿರ್ಮಾಣ ವಿಧಾನಗಳು ವೆಚ್ಚವನ್ನು ಕಡಿಮೆ ಮಾಡಬಹುದಾದ ಅಸಾಂಪ್ರದಾಯಿಕ, ನಿರ್ಧಿಷ್ಟವಾದ ವಿಧಾನಗಳಾಗಿವೆ. ರೈಟ್ ಬ್ರ್ಯಾಕೆಟ್, ಹೋಲ್ಡ್-ಡೌನ್ ಮತ್ತು ಫಸ್ಟ್ ನರ್, ಕಬ್ಬಿಣದ ಚೌಕಟ್ಟುಗಳ ಬಳಕೆಯು ಕಟ್ಟಡವನ್ನು ಭೂಕಂಪ ತಡೆದುಕೊಳ್ಳುವಂತೆ ಘಟ್ಟಿಗೊಳಿಸುತ್ತದೆ. ಸ್ಕ್ರೂಗಳು ಸಾಕಷ್ಟು ಹಿಡಿದುಕೊಳ್ಳುವ ಸಾಮರ್ಥ್ಯ ಹೊಂದಿವೆ. ಆದರೆ, ಒಜ್ಜೆ ಬಿದ್ದಾಗ ಒಳಗೇ ಮುರಿಯಬಲ್ಲವು. ಕತ್ತರಿಯಾಕಾರದಲ್ಲಿ ನಿರ್ಮಿತ ಗೋಡೆಗಳು, ಬ್ರ್ಯಾಕೆಟ್ ಗಳು, ಹಾಗೂ ಗಸೆಟ್ ಗಳನ್ನು ತೊಲೆಗಳನ್ನು ಘಟ್ಟಿ ಮಾಡಲು, ಜೋಡಿಕೆಗಳಲ್ಲಿ, ಸಂದುಗಳಲ್ಲಿ, ಸಿಲ್ ಪ್ಲೇಟ್ ಗಳಲ್ಲಿ, ಮತ್ತು ರೂಫ್ ಟ್ರೆಸ್ ಗಳಲ್ಲಿ ಈ ಮಾದರಿಯ ನಿರ್ಮಾಣದಲ್ಲಿ ಬಳಸಲಾಗುತ್ತದೆ.

 

ಮಣ್ಣಿನ ಇಟ್ಟಿಗೆ, ಗಾರೆ ಮುಂತಾದ ಮಣ್ಣಿನ ಗೋಡೆಗಳ ಅತಿಹೆಚ್ಚು ತೂಕ, ಸುಲಭವಾಗಿ ಒಡೆದುಹೊಗುವ ಸಂಯೋಜನೆಯು ಭೂಕಂಪ ತಡೆಯಲು ವಿಫಲವಾಗುತ್ತವೆ. ವಿಶೇಷವಾಗಿ ಕೂಡಿಕೆಗಳಲ್ಲಿ ಮತ್ತು ಉದ್ದವಾದ ಗೋಡೆಗಳಲ್ಲಿ ಕಟ್ಟಡದ ದೊಡ್ಡದಾದ ಭಾಗಗಳು ಬೀಳಲು ಕಾರಣವಾಗುತ್ತದೆ. ಬಿರುಕು ಮತ್ತು ಎಲ್ಲ ಭಾಗಗಳನ್ನು ಅಲುಗಾಡದಂತೆ ಮಾಡಲು ಗೋಡೆಗಳಲ್ಲಿ ಫೈಬರ್‌, ಬಾರ್, ರಾಡ್ ಅಥವಾ ಮೆಶ್ ಗಳಲ್ಲಿ ಬಲವರ್ಧಕ ಸಂಯೋಜನೆಗಳನ್ನು ಬಳಸಬಹುದು. ಕೊಳವೆ, ಬಳ್ಳಿ ಅಥವಾ ಸಿಂಥೆಟಿಕ್ ದಾರಗಳನ್ನು ಒಳಗೆ ಬಳಸುವುದರ ಮೂಲಕ ವಸ್ತುಗಳನ್ನು ಬಲವರ್ಧನೆ ಮಾಡಬಹುದು. ಮರದ ಹಲಗೆಗಳನ್ನು ಜೋಡಿಸಲು ಹಗ್ಗ, ಗಿಡ, ಬಳ್ಳಿ,ಎಳೆ ಅಥವಾ ಬಿದಿರನ್ನು ಬಳಸಬಹುದು ಮತ್ತು ಅಡಿಪಾಯದ ಅಂತರಗಳನ್ನು ತುಂಬಲು, ವಾಲ್ ಕ್ಯಾಪ್ ಗಳನ್ನು ಜೋಡಿಸಲು ರಾಡ್ ಗಳನ್ನು ಬಳಸಬಹುದು.ಇದು ವಿಶೇಷವಾಗಿ ಕೂಡಿಕೆಗಳ ಮೆಶ್ ಗಳನ್ನು ಬಲವರ್ಧಕಗೊಳಿಸಲು, ಸ್ಕ್ರೀನ್, ಚಿಕನ್ ವೈಯರ್ ಮುಂತಾದವುಗಳನ್ನು ಗೋಡೆಗಳನ್ನು ಜೋಡಿಸಲು ಬಳಸ ಬಹುದು ಮತ್ತು ಇದು ಶಕ್ತಿಯನ್ನು ಸಮನಾಗಿ ಹಂಚುತ್ತದೆ.



ಭೂಕಂಪ ನಿರೋಧಕ ಮನೆಗಳನ್ನು ಕಟ್ಟಲು ಕೆಲವೊಂದು ಸುರಕ್ಷಿತ ಪದ್ದತಿಗಳು ಇಲ್ಲಿವೆ. ನೀವು ಭೂಕಂಪ-ನಿರೋಧಕ ನಿರ್ಮಾಣ ತಂತ್ರಗಳ ಬಗ್ಗೆ ಮತ್ತಷ್ಟು ತಿಳಿಯಬೇಕೆಂದರೆ ನೀವು ಈ ವಿಡಿಯೋವನ್ನು ನೋಡಬಹುದು. ಗುಣಮಟ್ಟದ ಕಟ್ಟಡ ನಿರ್ಮಾಣ ವಸ್ತುಗಳನ್ನು ಮತ್ತು ಪರಿಣಿತರ ಪರಿಹಾರಗಳಿಗಾಗಿ ನಿಮ್ಮ ಹತ್ತಿರದ ಅಲ್ಟ್ರಾ ಟೆಕ್ ಬಿಲ್ಡಿಂಗ್ ಸೊಲ್ಯುಶನ್ಸ್ ಅಂಗಡಿಗೆ ಭೇಟಿ ನೀಡಿ.



ಸಂಬಂಧಿತ ಲೇಖನಗಳು




ಶಿಫಾರಸು ಮಾಡಿದ ವೀಡಿಯೊಗಳು





  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....