Get In Touch

Get Answer To Your Queries

acceptence


ಹಾರುಬೂದಿ (ಫ್ಲೈ ಆ್ಯಶ್‌) ಇಟ್ಟಿಗೆಗಳು ಮತ್ತು ಕೆಂಪು ಇಟ್ಟಿಗೆಗಳು: ನೀವು ಯಾವುದನ್ನು ಬಳಸಬೇಕು?

ಮನೆಯನ್ನು ಅಥವಾ ಉಳಿದ ಕಟ್ಟಡಗಳನ್ನು ಕಟ್ಟುವಾಗ ತುಂಬಾ ಮುಖ್ಯವಾಗಿ ತೆಗೆದುಕೊಳ್ಳಬೇಕಾದ ನಿರ್ಧಾರವೆಂದರೆ ಸರಿಯಾದ ರೀತಿಯ ಇಟ್ಟಿಗೆಯನ್ನು ಆಯ್ಕೆಮಾಡಿಕೊಳ್ಳುವುದು. ಇತ್ತಿಚಿನ ವರ್ಷಗಳಲ್ಲಿ ಸಂಪ್ರದಾಯಿಕ ಕೆಂಪು ಇಟ್ಟಿಗೆಗಳಿ ಪರ್ಯಾಯವಾಗಿ ಸಿಮೆಂಟ್ ಇಟ್ಟಿಗೆಗಳು ಹೆಚ್ಚು ಜನಪ್ರೀಯತೆಯನ್ನು ಗಳಿಸಿವೆ. ಹಾರು ಬೂದಿ ಇಟ್ಟಿಗೆ ಅಥವಾ ಕೆಂಪು ಇಟ್ಟಿಗೆ ಎರಡರಲ್ಲಿ‌ ನೀವು ಯಾವುದನ್ನು ಉಪಯೋಗಿಸುತ್ತಿರಿ?

Share:


ಎಲ್ಲ ತರದ ಇಟ್ಟಿಗೆಗಳನ್ನು ಪರಿಶೀಲಿಸೋಣ ಹಾಗೂ ಹಾರು ಬೂದಿ ಇಟ್ಟಿಗೆ ಮತ್ತು ಕೆಂಪು ಇಟ್ಟಿಗೆಗಳ ನಡುವೆ ಇರುವ ವ್ಯತ್ಯಾಸವನ್ನು ಕಂಡುಹಿಡಿಯೊಣ. ನೀವು ಮನೆಯ ಮಾಲೀಕರು ಅಥವಾ ಗುತ್ತಿಗೆದಾರರು ಯಾರೇ ಆಗಿದ್ದರು ಈ ಬ್ಲಾಗ್‌ ನಿಮಗೆ, ಇಟ್ಟಿಗೆಗಳ ಆಯ್ಕೆಯ ಬಗ್ಗೆ ಲಾಭದಾಯಕ ತಿಳುವಳುಕೆಯನ್ನು ನೀಡುತ್ತದೆ.



ಹಾರು ಬೂದಿ ಇಟ್ಟಿಗೆ ಎಂದರೆ ಏನು?

ಹಾರು ಬೂದಿ ಇಟ್ಟಿಗೆಗಳನ್ನು ಕಾರ್ಖಾನೆಯ ವ್ಯರ್ಥ ವಸ್ತುಗಳಿಂದ ಮಾಡಲಾಗುತ್ತದೆ. ಉದಾಹರಣೆಗೆ ಹಾರು ಬೂದಿ ಎನ್ನುವುದು ಕಲ್ಲಿದ್ದಲ್ಲು ಆಧಾರಿತ ಉಷ್ಣ ವಿದ್ಯುತ್‌ ಸ್ಥಾವರಗಳ ಉಪ ಉತ್ಪನ್ನವಾಗಿದೆ. ಹಾರು ಬೂದಿಯನ್ನು ಸಿಮೆಂಟ್ ನ ಮತ್ತು ನೀರು ಮತ್ತಿತರ ವಸ್ತುಗಳ ಜೊತೆ ಸೇರಿಸಿ, ಪೇಸ್ಟ ಮಾಡಿ ಅಚ್ಚುಗಳಲ್ಲಿ ಹಾಕಿ ನಂತರ ಹೆಚ್ಚು ಶಾಖದಲ್ಲಿ ಸುಡಲಾಗುತ್ತದೆ. ಇದರಿಂದ ಹೆಚ್ಚು ಬಾಳಿಕೆ ಬರುವ ಮತ್ತು ಹಗುರವಾದ ಇಟ್ಟಿಗೆಗಳನ್ನು ತಯಾರಿಸಲಾಗುತ್ತದೆ.


ಕೆಂಪು ಇಟ್ಟಿಗೆ ಎಂದರೆ ಏನು?

ಕೆಂಪು ಇಟ್ಟಿಗೆಗಳನ್ನು ಮಣ್ಣಿನ ಇಟ್ಟಿಗೆಗಳು ಎಂದು ಸಹ ಕರೆಯುತ್ತಾರೆ. ಇದು ಕಟ್ಟಡದ ವಸ್ತುವಾಗಿದ್ದು ನೈಸರ್ಗಿಕ ಮಣ್ಣಿನಿಂದ ಆಯಾತಾಕಾರವಾಗಿ ಮಾಡಿ ಒಲೆಯಲ್ಲಿ ಹೆಚ್ಚು ಉಷ್ಣಾಂಶದಲ್ಲಿ ಸುಡಲಾಗುತ್ತದೆ. ಇದೊಂದು ಅತ್ಯಂತ ಹಳೆಯ ಮತ್ತು ಸಾಂಪ್ರದಾಯಿಕ ಕಟ್ಟಡ ಕಟ್ಟುವ ಸಾಧನವಾಗಿದ್ದು ಜಗತ್ತಿನಾದ್ಯಂತ ಬಳಸಲಾಗುತ್ತಿತ್ತು.

 

ಹಾರು ಬೂದಿ ಇಟ್ಟಿಗೆಗಳು ಮತ್ತು ಕೆಂಪು ಇಟ್ಟಿಗೆಗಳು

ಈ ಎರಡು ರೀತಿಯ ಇಟ್ಟಿಗೆಗಳು ತಮ್ಮದೇ ಆದ ಅನುಕೂಲತೆ ಮತ್ತು ಅನಾನುಕೂಲತೆಯನ್ನು ಹೊಂದಿವೆ. ಹಾರು ಬೂದಿ ಇಟ್ಟಿಗ ಮತ್ತು ಕೆಂಪು ಇಟ್ಟಿಗೆಗಳ ಪ್ರಮುಖ ವ್ಯತ್ಯಾಸಗಳನ್ನು ಹೊಂದಿವೆ.

1. ಸಂಯೋಜನೆ

ಹಾರು ಬೂದಿ ಇಟ್ಟಿಗೆಗಳನ್ನು ಕಾರ್ಖಾನೆಯ ವ್ಯರ್ಥ ವಸ್ತುಗಳಿಂದ ಮಾಡಲಾಗುತ್ತದೆ. ಉದಾಹರಣೆಗೆ ಹಾರು ಬೂದಿ ಎನ್ನುವುದು ಕಲ್ಲಿದ್ದಲ್ಲು ಆಧಾರಿತ ಉಷ್ಣ ವಿದ್ಯುತ್‌ ಸ್ಥಾವರಗಳ ಉಪ ಉತ್ಪನ್ನವಾಗಿದೆ. ಹಾರು ಬೂದಿಯನ್ನು ಸಿಮೆಂಟ್ ನ ಮತ್ತು ನೀರು ಮತ್ತಿತರ ವಸ್ತುಗಳ ಜೊತೆ ಸೇರಿಸಿ, ಪೇಸ್ಟ ಮಾಡಿ ಅಚ್ಚುಗಳಲ್ಲಿ ಹಾಕಿ ನಂತರ ಹೆಚ್ಚು ಶಾಖದಲ್ಲಿ ಸುಡಲಾಗುತ್ತದೆ. ಇದರಿಂದ ಹೆಚ್ಚು ಬಾಳಿಕೆ ಬರುವ ಮತ್ತು ಹಗುರವಾದ ಇಟ್ಟಿಗೆಗಳನ್ನು ತಯಾರಿಸಲಾಗುತ್ತದೆ.
 

2. ನಿರೋಧನ

ಹಾರು ಬೂದಿ ಇಟ್ಟಿಗೆಗಳು ಕಡಿಮೆ ಶಾಖ ನಿರೋಧಕ ಗುಣಗಳನ್ನು ಹೊಂದಿವೆ. ಮತ್ತು ಇದು ಚಳಿಗಾಲದಲ್ಲಿ ಶಾಖವನ್ನು ಕಾಪಾಡಿಕೊಳ್ಳಲು ಪರಿಣಾಮಕಾರಿಯಲ್ಲ. ಇದಕ್ಕೆ ವಿರುದ್ಧವಾಗಿ ಕೆಂಪು ಇಟ್ಟಿಗೆಗಳು ಶಬ್ಧ ಮತ್ತು ಶಾಖದ ನಿರೋಧಕ ವಾಗಿವೆ‌. ಇದರ ಹೆಚ್ಚಿನ ಸಾಂದ್ರತೆ ಮತ್ತು ಕಡಿಮೆ ಶಾಖ ವಾಹಕತೆಯಿಂದ ಇವು ಶಾಖ ಮತ್ತು ಶಬ್ಧ ನಿರೋಧಕವಾಗಿದೆ. ಅದಕ್ಕಾಗಿ ಶಾಖದ ಮತ್ತು ಶಬ್ಧದ ನಿಯಂತ್ರಣದ ಹೆಚ್ಚು ಅವಶ್ಯಕತೆ ಇರುವ ಜಾಗಗಳಲ್ಲಿ‌ ಇದು ಪ್ರಮುಖ ಆದ್ಯತೆಯಾಗಿದೆ.
 

3. ಮೇಲ್ಮೈ

ಹಾರು ಬೂದಿ ಇಟ್ಟಿಗೆಗಳು ನಯವಾದ ಮೇಲ್ಮೈ ಯನ್ನು ನೀಡುತ್ತವೆ ಇದರಿಂದ ಪ್ಲಾಸ್ಟರ್ ನ ಅವಶ್ಯಕತೆ ಇರುವುದಿಲ್ಲ. ಇವುಗಳು ನಯವಾಗಿ ಮತ್ತು ಸುಂದರವಾಗಿ ಕಾಣುತ್ತವೆ ಮತ್ತು ನಿರ್ಮಾಣದ ಸಮಯ ಮತ್ತು ಖರ್ಚನ್ನು ಉಳಿಸುತ್ತವೆ. ಇದಕ್ಕೆ ವಿರುದ್ದವಾಗಿ ಕೆಂಪು ಇಟ್ಟಿಗೆಗಳ ನವವಾಗಿ ಸಿದ್ದಪಡಿಸಲು ಕಾಣಲು‌ ಪ್ಲಾಸ್ಟರ್ ನ ಅವಶ್ಯಕತೆ ಇರುತ್ತದೆ.
 

4.ಸಾಂದ್ರತೆ

ಹಾರು ಬೂದಿ ಇಟ್ಟಿಗೆಗಳು, ಕೆಂಪು ಇಟ್ಟಿಗೆಗಳಿಗಿಂತ ಹಗುರವಾಗಿರುತ್ತವೆ. ಹಾರು ಬೂದಿ ಇಟ್ಟಿಗೆಗಳು ಹಗುರವಾಗಿರುತ್ತವೆ ಎಕೆಂದರೆ ಇವುಗಳನ್ನು ತಯಾರಿಸುವ ಪ್ರಕ್ರಿಯೆಯಲ್ಲಿ ಇದರ ಎಲ್ಲ ಸಾಂದ್ರತೆಯು ಕಡಿಮೆಯಾಗುತ್ತದೆ. ಇದು ಹಗುರವಾಗಿರುವುದರಿಂದ ಇದನ್ನು ಬಳಸುವುದು, ಸಾಗಿಸುವುದು ಮತ್ತು ಕಟ್ಟಡ ನಿರ್ಮಾಣದಲ್ಲಿ ಬಳಸುವುದು ಸುಲಭವಾಗಿದೆ. ಇದಕ್ಕೆ ವಿರುದ್ದವಾಗಿ ಕೆಂಪು ಇಟ್ಟಿಗೆಗಳನ್ನು ಮಣ್ಣಿನಿಂದ ತಯಾರಿಸುವುದರಿಂದ ಭಾರವಾಗಿ ಮತ್ತು ಸಾಂದ್ರತೆಯಿಂದ ಕೂಡಿರುತ್ತವೆ. ಹೆಚ್ಚಿನ ಸಾಂದ್ರತೆಯಿಂದ ಇವುಗಳು ಲಟ್ಟಡಗಳಿಗೆ ಹೆಚ್ಚು ಸಾಮರ್ಥ್ಯ ಮತ್ತು ಸ್ಥಿರತೆಯನ್ನು ನೀಡಿತ್ತವೆ.
 

5. ಸಂಕುಚನ (ಕಂಪ್ರೆಸ್ಸೀವ್)‌ ಸಾಮರ್ಥ್ಯ

ಕೆಂಪು ಇಟ್ಟಿಗೆಗಳು‌ ಅವುಗಳ ಸಾಮರ್ಥ್ಯ ಮತ್ತು ಬಾಳಿಕೆಗೆ ಹೆಸರುವಾಸಿಯಾಗಿವೆ. ಇವುಗಳು ಹಾರು ಬೂದಿ ಇಟ್ಟಂಗಿಗಳಿಗೆ ಹೊಲಿಸಿದರೆ ಹೆಚ್ಚಿನ ಸಂಕುಚಿತ ಸಾಮರ್ಥ್ಯ ವನ್ನು ಹೊಂದಿದೆ. ಆದ್ದರಿಂದ‌ ಇವುಗಳು ಹೆಚ್ಚು ಭಾರವನ್ನು ಹೊರಬೇಕಾದ ಕಟ್ಟಡಗಳಿಗೆ ಸೂಕ್ತವಾಗಿದೆ. ಕೆಂಪು‌ಇಟ್ಟಿಗೆಗಳ ಹೆಚ್ಚಿನ ಸಾಮರ್ಥ್ಯವು ಹೆಚ್ಚಿನ ಭಾರವನ್ನು ತಡೆದು ಕೊಳ್ಳುವುದರೊಂದಿಗೆ ಕಟ್ಟಡವು ವಿರೂಪಗೊಳ್ಳದಂತೆ ಅಥವಾ ವಿನ್ಯಾಸ ವಿಫಲವಾಗದಂತೆ ಮಾಡುತ್ತವೆ. ಹಾರು ಬೂದಿ ಇಟ್ಟಿಗೆಗಳು, ಕೆಂಪು ಇಟ್ಟಿಗೆಗಳಿಗಿಂತ ಕಡಿಮೆ ಸಂಕುಚಿತ ಸಾಮರ್ಥ್ಯ ವನ್ನು ಹೊಂದಿರುತ್ತವೆ ಆದರೂ ಅವುಗಳು ಸಾಕಷ್ಟು ಸಾಮರ್ಥ್ಯ ವನ್ನು ಹಲವಾರು ನಿರ್ಮಾಣ ಕಾರ್ಯಗಳಿಗೆ ನೀಡುತ್ತವೆ.
 

6. ನೀರಿನ ಹೀರಿಕೊಳ್ಳುವಿಕೆ

ಹಾರು ಬೂದಿ ಇಟ್ಟಿಗೆಗಳು, ಕೆಂಪು ಇಟ್ಟಿಗೆಗಳಿಗಿಂತ ಹೆಚ್ಚಿನ ನೀರುನ್ನು ಹೀರಿಕೊಳ್ಳುತ್ತವೆ. ಹಾರು ಬೂದಿ ‌ಇಟ್ಟಿಗೆಗಳು ರಂದ್ರದ ರಚನೆಯನ್ನು ಹೊಂದಿರುವುದರಿಂದ ಉತ್ತಮ ಕಣಗಳೊಂದಿಗೆ ಹೆಚ್ಚು ನೀರನ್ನು ಹೀರಿಕೊಳ್ಳುತ್ತದೆ. ಹಾರು ಬೂದಿ ಇಟ್ಟಿಗೆಗಳ ಹೆಚ್ಚು ನೀರು ಹೀರಿಕೊಳ್ಳುವ ಗುಣಗಳಿಂದ, ವಾಟರ್ ಪ್ರೂಪಿಂಗ್ ಮಾಡದೆ ಇದ್ದರೆ ತೇವಾಂಶಕ್ಕೆ ಸಂಬಂಧಿಸಿದ ಸಮಸ್ಯೆಗಳಾದ ಎಫ್ಲೊರಿಸೆನ್ಸ ಮತ್ತು ಸ್ಪಾಲಿಂಗ್ ಕಾರಣವಾಗುತ್ತದೆ. ಕೆಂಪು ಇಟ್ಟಿಗೆಗಳು ಹೆಚ್ಚು ಸಾಂದ್ರತೆಯುಳ್ಳ ರಚನೆಯಿಂದ, ಸಾಮಾನ್ಯವಾಗಿ ಕಡಿಮೆ ನೀರನ್ನು ಹೀರಿಕೊಳ್ಳುತ್ತದೆ ಮತ್ತು ತೇವಾಂಶಕ್ಕೆ ಸಂಬಂದಿಸಿದ ಸಮಸ್ಯೆಗಳಿಗೆ ಕಡಿಮೆ‌ ತುತ್ತಾಗುತ್ತವೆ.
 

7. ಸ್ವಯಂ-ತೂಕ

ಹಾರು ಬೂದಿ ಇಟ್ಟಿಗೆಗಳು, ಕೆಂಪು ಇಟ್ಟಿಗೆಗಳಿಗೆ ಹೊಲಿಸಿದರೆ ಕಡಿಮೆ ಭಾರವನ್ನು ಹೊಂದಿರುತ್ತವೆ. ಕಡಿಮೆ‌ ಭಾರವನ್ನು ಹೊಂದಿರುವುದರಿಂದ ಫ್ಲೈ ಆ್ಯಶ್‌ ಇಟ್ಟಿಗೆಗಳನ್ನು ನಿರ್ವಹಿಸಲು, ಸಾಗಾಟ ಮಾಡಲು ಮತ್ತು ಕಟ್ಟಡದಲ್ಲಿ‌ ಕಟ್ಟಲು ಸುಲಭವಾಗುತ್ತದೆ. ಕೆಂಪು ಇಟ್ಟಿಗೆಗಳು ಹೆಚ್ಚು ಭಾರವಿರುವುದರಿಂದ ಸಾಗಾಟಕ್ಕೆ ಮತ್ತು ಕಟ್ಟಡ ಕಟ್ಟಲು ಹೆಚ್ಚು ಕೆಲಸಗಾರರು ಬೇಕಾಗುತ್ತದೆ. ಭರದ ಲೆಕ್ಕಾಚಾರದಲ್ಲಿ ಕೆಂಪು ಇಟ್ಟಿಗೆಗಳಿಗಿಂತ ಫ್ಲೈ ಆ್ಯಶ್‌ ಇಟ್ಟಿಗೆಗಳು ಒಳ್ಳೆಯ ಆಯ್ಕೆಯಾಗಿದೆ

ಈ‌ ವಿವರಣೆಗಳು ಆಳವಾಗಿ ಹಾರು ಬೂದಿ ಇಟ್ಟಿಗೆಗಳನ್ನು ಮತ್ತು ಕೆಂಪು ಇಟ್ಟಿಗೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ. ಅವುಗಳ‌ ಗುಣ, ಅವುಗಳು ಹೇಗೆ ಕಾಣುತ್ತವೆ ಮತ್ತು ಕಟ್ಟಡ ನಿರ್ಮಾಣದಲ್ಲಿ ಸಂಭಾವ್ಯ ಪರಿಣಾಮಗಳನ್ನು ಸಹ ತಿಳಿಸಿಕೊಡುತ್ತವೆ.



ಹಾರು ಬೂದಿ ಇಟ್ಟಿಗೆಗಳನ್ನು ಉಪಯೋಗಿಸುವುದರ ಉಪಯೋಗಗಳು

ಹಾರು ಬೂದಿ ಇಟ್ಟಿಗೆಗಳನ್ನು ಬಳಸುವುದರಿಂದ ಹಲವಾರು ಉಪಯೋಗಗಳು ಇವೆ. ಅವುಗಳೆಂದರೆ:

 

1. ಪರಿಸರ ಸ್ನೇಹಿ

ಹಾರು ಬೂದಿ ಇಟ್ಟಿಗೆಗಳು ಪರಿಸರ ಪ್ರಜ್ಞೆಯಲ್ಲಿ‌ ಗೆಲ್ಲುತ್ತವೆ. ಕಾರ್ಖಾನೆಗಳ ತ್ಯಾಜ್ಯವನ್ನು ಉಪಯೋಗಿಸುವುದರಿಂದ, ಆ ತ್ಯಾಜ್ಯವು ಪರಿಸರದ ಮೇಲೆ ಹೊರೆಯಾಗುವುದನ್ನು ತಪ್ಪಿಸಿದಂತಾಗುತ್ತದೆ. ಇದರಿಂದ ಭವಿಷ್ಯದಲ್ಲಿ ಪರಿಸರವು ಹಸಿರಾಗಿಸಲು ಅವಕಾಶ ನೀಡಿದಂತಾಗುತ್ತದೆ.
 

2. ಇಂಧನದ ಧಕ್ಷತೆ

ಹಾದು ಬೂದಿ ಇಟ್ಟಿಗೆಗಳಿಂದ ಇಂದನದ ಉಳಿತಾಯವು ನೈಸರ್ಗಿಕವಾಗಿ ಬರುತ್ತದೆ. ಇವುಗಳ ತಯಾರಿಕೆಯು ಸಂಪ್ರದಾಯಿಕ ಕೆಂಪು ಇಟ್ಟಂಗಿಗಳಿಗಿಂತ ಕಡಿಮೆ ಇಂಧನ ಸಾಕಾಗುತ್ತದೆ. ಇದರಿಂದ ಗ್ರೀನ್ ಹೌಸ್ ನ ಗಾಳಿಯು ಹೊರಹೋಗುವುದನ್ನು ಕಡಿಮೆ ಮಾಡುತ್ತದೆ ಮತ್ತು ಕಾರ್ಬನ್ ಫೂಟ್ ಪ್ರಿಂಟ್ ನ್ನು ಕಡಿಮೆ ಮಾಡುತ್ತದೆ.
 

3. ಕಡಿಮೆ ಭಾರ

ಹಾರು ಬೂದಿ ಇಟ್ಟಿಗೆಗಳು ತುಂಬ ಹಗುರವಾಗಿರುತ್ತವೆ ಇದರಿಂದ ಇವುಗಳನ್ನು ನಿರ್ವಹಣೆ ಮತ್ತು ಸಾಗಾಟವು ತುಂಬ ಸುಲಭವಾಗಿದೆ. ನೀವು ಕಟ್ಟಡ ನಿರ್ಮಾಣದಲ್ಲಿ‌ ಸಮಯ ಮತ್ತು ರಲ್ಲಿ ಪ್ರಯತ್ನವನ್ನು ಉಳಿಸುತ್ತದೆ. ಇದರಿಂದ ನಿಮ್ಮ ಯೋಜನೆಯು ಎಂದಿಗಿಂತ ಸುಲಭವಾಗುತ್ತದೆ.
 

4. ಪರಿಣಾಮಕಾರಿ ವೆಚ್ಚ

ಇವು ಅದ್ಬುತವಾಗಿ ಮತ್ತು ಪರಿಣಾಮಕಾರಿಯಾಗಿ ವೆಚ್ಚವನ್ನು ಕಡಿಮೆ ಮಾಡುವುದರಿಂದ ನಿಮ್ಮ ಹೂಡಿಕೆಗೆ ಹೆಚ್ಚಿನ ಬೆಲೆಯನ್ನು ನೀಡುತ್ತವೆ ಮತ್ತು ಬಜೆಟ್ ಹೆಚ್ಚಾಗದಂತೆ ಮತ್ತು ಗುಣಮಟ್ಟದಲ್ಲಿ ಹೊಂದಾಣಿಕೆಯಾಗದಂತೆ ಮಾಡುತ್ತದೆ.

 

5. ಉತ್ತಮ ನಿರೋಧಕ

ಹಾರು ಬೂದಿ ಇಟ್ಟಿಗೆಗಳು ನಿಮ್ಮ ಯೋಜನೆಗೆ ಒಳ್ಳೆಯ ನಿರೋಧಕವನ್ನು ನೀಡುತ್ತವೆ. ಇವುಗಳು ತಮ್ಮ ಹೆಚ್ವಿನ ನಿರೊಧಕ ಶಕ್ತಿಯಿಂದ ಉಷ್ಣಾಂಶವನ್ನು ನಿಯಂತ್ರಿಸುತ್ತದೆ ಮತ್ತು ಇಂಧನದ ಬಳಕೆಯನ್ನು ಕಡಿಮೆಗೊಳಿಸಿ‌ ವರ್ಷವಿಡಿ ಆರಾಮವಾಗಿರಲು ಅನುಕೂಲ ಮಾಡಿಕೊಡುತ್ತದೆ.
 

ಹಾರು ಬೂದಿ ಇಟ್ಟಿಗೆಗಳು ಗುಣಗಳು

ಹಾರು ಬೂದಿ ಇಟ್ಟಿಗೆಗಳ ಈ ಗುಣಗಳು ತಮ್ಮ ಜನಪ್ರಿಯತೆಯತೆಗೆ ಮತ್ತು ನಿರ್ಮಾಣ ಯೋಜನೆಗಳಿಗೆ ಸೂಕ್ತವಾಗಿವೆ .

 

1. ಸಂಕುಚನ (ಕಂಪ್ರೆಸ್ಸೀವ್)‌ ಸಾಮರ್ಥ್ಯ

ಹಾರು ಬೂದಿ ಇಟ್ಟಿಗೆಗಳು 75- 100 kg/cm2 ವರೆಗಿನ ಸಾಂದ್ರತೆಯ ಸಾಮರ್ಥ್ಯವನ್ನು ಹೊಂದಿದ ಹೆಗ್ಗಳಿಕೆಯನ್ನು ಹೊಂದಿವೆ. ಇವುಗಳು ಬರಿ ಇಟ್ಟಿಗೆಗಳು ಮಾತ್ರವಲ್ಲ, ಹೆಚ್ಚು ಭಾರವನ್ನು ಹೊಂದಿರುವ ಕಟ್ಟಡಗಳ ಬೆನ್ನೆಲುಬಾಗಿ ನಿಂತು ಹೆಚ್ಚು ಭಾರವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ನೀಡುತ್ತವೆ.

2. ಅಗ್ನಿ ನಿರೋಧಕ

ಹೆಚ್ಚಿನ ಶಾಖವನ್ನು ತಡೆದುಕೊಳ್ಳುವ ಸಾಮರ್ಥ್ಯ ಮತ್ತು ವಿಷಕಾರಿಯಲ್ಲದ ಸ್ವಭಾವದಿಂದ ಇವುಗಳು ಬೆಂಕಿ ತಗುಲಿದಾಗ ಹಾನಿಕಾರಕ ಅನಿಲವನ್ನು ಸೂಸುವುದಿಲ್ಲ. ಫ್ಲೈ ಆ್ಯಶ್‌ ಇಟ್ಟಿಗೆಗಳು ಹೆಚ್ಚಿನ ಅಗ್ನಿ ನಿರೋಧಕವನ್ನು ನೀಡುವುದರಿಂದ‌ ನೀವು ಹೆಚ್ವಿ ಸುರಕ್ಷಿತ ಅನುಭವವನ್ನು ಪಡೆಯಬಹುದು.

3. ಶಬ್ಧ ನಿರೋಧಕ

ಫ್ಲೈ ಆ್ಯಶ್‌ ಇಟ್ಟಿಗೆಗಳು ಅತ್ಯುತ್ತಮ ಶಬ್ದ ನಿರೊಧಕವಾದ ಗುಣಗಳಿಂದ ಶಬ್ದದ ಅಲೆಗಳನ್ನು ಹೀರಿಕೊಳ್ಳುತ್ತದೆ. ಇದರಿಂದ ನಿಮ್ಮ ಜಾಗವು ಶಾಂತವಾಗುತ್ತದೆ ಮತ್ತು ನಗರದ ಗದ್ದಲದ ಅವ್ಯವಸ್ಥೆಯಿಂದ ಅಥವಾ ಅವಿಶ್ರಾಂತ ಅಕ್ಕಪಕ್ಕದವರಿಂದ ಕಾಪಾಡುತ್ತದೆ .

4. ಬಾಳಿಕೆ

ಫ್ಲೈ ಆ್ಯಶ್‌ ಇಟ್ಟಿಗೆಗಳು ಹೆಚ್ಚು ಸ್ಥಿತಿಸ್ಥಾಪಕ ಶಕ್ತಿಯಿಂದ ಅತಿ ಹೆಚ್ಚು ಬಾಳಿಕೆ ಬರುತ್ತವೆ. ಇವುಗಳು ಹವಾಮಾನ, ಸೆವೆತ ಮತ್ತು ರಾಸಾಯನಿಕ ದಾಳಿಯನ್ನು ತಡೆದುಕೊಂಡು ಗಟ್ಟಿಯಾಗಿ ನಿಲ್ಲುವ ಸಾಮರ್ಥ್ಯವನ್ನು ಹೊಂದಿವೆ. ಹೆಚ್ಚು ಉಷ್ಣ ಮತ್ತು ಮಳೆಯಿಂದ, ಫ್ಲೈ ಆ್ಯಶ್‌ ಇಟ್ಟಿಗೆಗಳು ಕಟ್ಟಡದ ಸಮಗ್ರತೆಯನ್ನು ಕಾಪಾಡುತ್ತವೆ.

5. ಪರಿಸರ ಸ್ನೇಹಿ

ಫ್ಲೈ ಆ್ಯಶ್‌ ಇಟ್ಟಿಗೆಗಳು ಬಾಳಿಕೆಬರುವುದರಲ್ಲಿ ಸಾರ್ಥಕ ವಾಗಿವೆ. ಕೈಗಾರಿಕೆಗಳ ವ್ಯರ್ಥ ವಸ್ತುವಾದ ಫ್ಲೈ ಆ್ಯಶ್‌ ಗಳು, ಹೊಸ ರೂಪವನ್ನು ತಾಳುವುಸರಿಂದ‌ ಮುಂದಾಗುವ ಭೂಕುಸಿತವನ್ನು ‌ತಡೆಯುತ್ತವೆ. ಫ್ಲೈ ಆ್ಯಶ್‌ ಇಟ್ಟಿಗೆಗಳು ಸಕ್ರೀಯವಾಗಿ ಹವಾಮಾನ ಮಾಲಿನ್ಯ ವನ್ನು ತಡೆಯುತ್ತವೆ ಮತ್ತು ಕಾರ್ಬನ್ ಫೂಟ್ ಪ್ರಿಂಟ್ ಅನ್ನು ಕಟಿಮೆ ಮಾಡುತ್ತವೆ.

 

ಫ್ಲೈ ಆ್ಯಶ್‌ ಇಟ್ಟಿಗೆಗಳು ಸಾಂಪ್ರದಾಯಿಕ ಮಿತಿಗಳನ್ನು ಮೀರಿ ನಿರ್ಮಾಣ ಮಾಡಲು ಅನುವು ಮಾಡಿಕೊಡುತ್ತವೆ.

 

ಇದನ್ನು ಸಹ ಓದಿ: ಎಎಸಿ‌ ಬ್ಲಾಕ್ ನ ವಿಧಗಳು





ಹಾರು ಬೂದಿ ಇಟ್ಟಿಗೆಗಳು ಮತ್ತು ಕೆಂಪು ಇಟ್ಟಿಗೆಗಳ ಮದ್ಯೆ ಆಯ್ಕೆ ಮಾಡಿಕೊಳ್ಳುವುದು ನಿಮ್ಮ ಯೊಜನೆಗೆ ಯಾವುದು ಸೂಕ್ತವಾಗುತ್ತದೆ ಎಂಬುದು ಮುಖ್ಯವಾಗುತ್ತದೆ. ಎರಡು ಇಟ್ಟಿಗೆಗಳ ಅನುಕೂಲ ಮತ್ತು ಅನಾನುಕೂಲವನ್ನು ಹೋಲಿಸುವುದು ಮತ್ತು ಇಟ್ಟಿಗೆಗಳ ಮೇಲೆ ನೆಡೆದ ಪ್ರಯೋಗವನ್ನು ಪರಿಶೀಲಿಸುವುದು ತುಂಬ ಮುಖ್ಯವಾಗುತ್ತದೆ. ತುಂಬ ಮುಖ್ಯವಾಗಿ ನಿಮ್ಮ ನಿರ್ಮಾಣ ಯೋಜನೆಯು ಸುರಕ್ಷಿತವಾಗಿ, ದೀರ್ಘ ಬಾಳಿಕೆ ಬರುವುದು‌ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಇರುವುದಾಗಿದೆ. ಆದ್ದರಿಂದ ನಿಮ್ಮ ಸಮಯವನ್ನು ತೆಗೆದುಕೊಂಡು ನಿಮ್ಮ ಅವಶ್ಯಕತೆಗೆ ತಕ್ಕದಾದ ಇಟ್ಟಿಗೆಗಳನ್ನು ಆಯ್ದುಕೊಳ್ಳಿ. ನಿಮಗೆ ನೀವು ಬಳಸುವ ವಸ್ತುಗಳ ಬಗ್ಗೆ ಹೆಚ್ವು ತಿಳಿದಿದ್ದಾಗ ನಿರ್ಮಾಣ ಯೋಜನೆಯ ಬಗೆಗಿನ ನಿರ್ಧಾರವನ್ನು ತೆಗೆದುಕೊಳ್ಳಲು ಸಾಹಾಯವಾಗುತ್ತದೆ.



ಸಂಬಂಧಿತ ಲೇಖನಗಳು



ಶಿಫಾರಸು ಮಾಡಿದ ವೀಡಿಯೊಗಳು




  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....